ಮದುವೆ ವಾಗ್ದಾನ ತಪ್ಪಿಸಿದ ಯುವಕನ ವಿರುದ್ಧ ದೂರು
ಬೆಂಗಳೂರು, ಆ.09 : ಮದುವೆಯಾಗುವುದಾಗಿ ವಾಗ್ದಾನ ಮಾಡಿ, ನಂತರ ನಿರಾಕರಿಸಿದ ಪ್ರಕರಣವೊಂದು ನಗರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪ್ರಕಾರ, 2023ರ ಮಾರ್ಚ್‌ನಲ್ಲಿ ಹರೀಶ್ ಬಾಬು ಎಂಬಾತನು ಮದುವೆಯಾಗುವುದಾಗಿ ಹೇಳಿ, ತಮ್ಮೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದ. ಈ ಅವಧಿಯಲ್ಲಿ ತಾವು ಹಣ ಹಾಗೂ ಆಭರಣಗಳನ್ನು ನೀಡಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ, ಹರೀಶ್ ಬಾಬು “ನೀನು ನನಗೆ ಬೇಡ, ನಾನು ಬೇರೆ ಹುಡುಗಿಯನ್ನು ಮದುವೆಯಾಗುತ್ತೇನೆ” ಎಂದು ಹೇಳಿ, ಕರೆ-ಮೆಸೇಜ್ ಮಾಡದಂತೆ ಬೆದರಿಕೆ ಹಾಕುತ್ತಿದ್ದಾನೆಂದು ಆರೋಪಿಸಿದ್ದಾರೆ.
ಅಂತೋಣಿ ರಾಜ್ ಎಂಬಾತನು ಹರೀಶ್ ಬಾಬುಗೆ ತಮ್ಮ ಬಗ್ಗೆ ಸುಳ್ಳು ಆರೋಪಗಳನ್ನು ಹೇಳಿ, ಇವರಿಬ್ಬರ ಸಂಬಂಧ ಹಾಳುಮಾಡಲು ಕಾರಣನಾಗಿದ್ದಾನೆಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ, ಕೇಸು ವಾಪಸ್ಸು ಪಡೆಯುವಂತೆ ಹರೀಶ್ ಬಾಬು ಒತ್ತಾಯಿಸುತ್ತಿದ್ದಾನೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

