ಯಲಹಂಕದಲ್ಲಿ ಆಸ್ತಿ ವಂಚನೆ – ನಕಲಿ ದಾಖಲೆಗಳ ಮೂಲಕ ಕಬಳಿಕೆ ಯತ್ನ
ಬೆಂಗಳೂರು: ಆಗಸ್ಟ್ 12 2025
ಯಲಹಂಕ ತಾಲೂಕಿನ ಕುವೆಂಪುನಗರದ ಸಿಂಗಾಪುರ ಗ್ರಾಮದಲ್ಲಿ ಆಸ್ತಿ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ದಿವ್ಯ ಅವರ ಹೇಳಿಕೆಯ ಪ್ರಕಾರ, 2010ರಲ್ಲಿ ಅವರು ಸೈಟ್ ನಂ.109ರಲ್ಲಿ ಮನೆ ನಿರ್ಮಿಸಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ತಾಯಿ ನಿಧನದ ಬಳಿಕ 2024ರ ಜನವರಿ ಮೊದಲ ವಾರದಲ್ಲಿ ಆರೋಪಿಗಳಾದ ಎ2 ಮತ್ತು ಎ3ರು ಅನುಮತಿ ಇಲ್ಲದೇ ಆಸ್ತಿಗೆ ಅತಿಕ್ರಮ ಪ್ರವೇಶ ಮಾಡಿ ಬಾಡಿಗೆಗೆ ನೀಡಲು ಯತ್ನಿಸಿದರು.
ತನಿಖೆಯಲ್ಲಿ, ಆರೋಪಿಗಳು ಎ1ರಿಂದ ಉಡುಗೊರೆಯಾಗಿ ಪಡೆದಿದ್ದೇವೆಂದು ಹೇಳಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಬಹಿರಂಗವಾಗಿದೆ. ಪಿರ್ಯಾದಿಯ ಪ್ರಕಾರ, ಈ ಮೂವರು ಆರೋಪಿಗಳು ಸುಳ್ಳು ದಾಖಲೆಗಳ ಆಧಾರದ ಮೇಲೆ ಆಸ್ತಿಯನ್ನು ಕಬಳಿಸಲು ಬೆದರಿಕೆ ಹಾಕಿದ್ದು, ವಂಚನೆಗೆ ಮುಂದಾಗಿದ್ದಾರೆ. ವಿದ್ಯಾರಣ್ಯಪುರ ಪೊಲೀಸರು ಎ1, ಎ2 ಮತ್ತು ಎ3ರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

