ಅಗ್ರಹಾರ ಬಡಾವಣೆಯಲ್ಲಿ 18 ವರ್ಷದ ಯುವತಿ ಕಾಣೆಯಾದ ಪ್ರಕರಣ
ಬೆಂಗಳೂರು: ಆಗಸ್ಟ್ 12 2018
ನಗರದ ಅಗ್ರಹಾರ ಬಡಾವಣೆಯಲ್ಲಿ 18 ವರ್ಷದ ಯುವತಿ ಕಾಣೆಯಾದ ಘಟನೆ ನಡೆದಿದೆ. ಕಾಣೆಯಾದ ಯುವತಿ ಅನ್ನಪೂರ್ಣ ಅವರು ನವಾಮಿ ಅಪಾರ್ಟ್ಮೆಂಟ್ನಲ್ಲಿ ಪ್ರವೀಣ ಎಂಬವರ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು.
ಸಂಪಿಗೆಹಳ್ಳಿ ಪೊಲೀಸರ ಮಾಹಿತಿ ಪ್ರಕಾರ, ಆಗಸ್ಟ್ 9ರಂದು ಸಂಜೆ 4 ಗಂಟೆಯ ವೇಳೆಗೆ ತಾಯಿಗೆ “ಹೊರಗೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆ ಬಿಟ್ಟ ಅನ್ನಪೂರ್ಣ, ರಾತ್ರಿ ವಾಪಸ್ ಬರಲಿಲ್ಲ. ಕುಟುಂಬದವರು ಮೊಬೈಲ್ಗೆ ಕರೆ ಮಾಡಿದರೂ ಸ್ವಿಚ್ ಆಫ್ ಆಗಿದ್ದು, ಸಂಬಂಧಿಕರು ಹಾಗೂ ಪರಿಚಿತರಿಂದ ವಿಚಾರಿಸಿದರೂ ಯಾವುದೇ ಸುಳಿವು ಸಿಗಲಿಲ್ಲ.
ಕಾಣೆಯಾದ ಯುವತಿಯ ಎತ್ತರ ಸುಮಾರು 5 ಅಡಿ 2 ಇಂಚು, ಗೋಧಿ ಮೈಬಣ್ಣ, ಕಪ್ಪು ಕೂದಲು, ವಿಶೇಷ ಗುರುತು ಇಲ್ಲ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆ ಮಾತನಾಡಬಲ್ಲ ಅವರು ಕಾಣೆಯಾದಾಗ ಹಳದಿ ಬಣ್ಣದ ಚೂಡಿದಾರ ಧರಿಸಿದ್ದರು.
ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಡುಕಾಟ ಮುಂದುವರಿದಿದೆ

