ಸುದ್ದಿ 

ಹೆಬ್ಬಾಳ ಶಿಕ್ಷಕಿಯ ವಿರುದ್ಧ ಕಿರುಕುಳ – ಪ್ರಕರಣ ದಾಖಲು

Taluknewsmedia.com

ಬೆಂಗಳೂರು: ಆಗಸ್ಟ್ 16 2025
ಹೆಬ್ಬಾಳದಲ್ಲಿರುವ ಕೆ.ಪಿ.ಎಸ್ ಶಾಲೆಯೊಬ್ಬ ಶಿಕ್ಷಕಿಯು, ತನ್ನ ಮೇಲೆ ಕಿರುಕುಳ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ವಿಶ್ವನಾಥ್ ಎಂಬ ವ್ಯಕ್ತಿಯ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರು ಪ್ರಕಾರ, ಆರೋಪಿಯು ಸುಮಾರು ಎಂಟು ತಿಂಗಳಿನಿಂದ ಪರಿಚಯವಾಗಿದ್ದು, ಜುಲೈ 18ರಿಂದ ಶಿಕ್ಷಕಿಯ ಮನೆಯಲ್ಲಿ ಹಾರ್ನ್ ಹೊಡೆದು ತೊಂದರೆ ನೀಡುತ್ತಿದ್ದನು ಮತ್ತು ಕೆಲಸಕ್ಕೆ ಹೋಗುವಾಗ ಪ್ರತಿದಿನ ಹಿಂಬಾಲಿಸುತ್ತಿದ್ದನು. ಆಗಸ್ಟ್ 1ರಂದು ಸಂಜೆ 5 ಗಂಟೆಗೆ, ಶಿಕ್ಷಕಿ ಮತ್ತು ಅವರ ಮಗಳನ್ನು ಹಿಂಬಾಲಿಸಿ ಬಂದು ಆವಾಚ್ಯ ಶಬ್ದಗಳಿಂದ ಬೈದು ಬಾಯಿಂದ ಉಗುಳಿದ್ದಾನೆ.

ಪರಿಚಯದ ಆರಂಭದಲ್ಲಿ ಶಿಕ್ಷಕಿಯ ವೈಯಕ್ತಿಕ ಫೋಟೋಗಳನ್ನು ತೆಗೆದುಕೊಂಡಿದ್ದ ಆರೋಪಿಯು, ಅವುಗಳನ್ನು ಅವರ ತಂಗಿಯ ಮೊಬೈಲ್‌ಗೆ ಕಳುಹಿಸಿ, ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದಾಗಿ ಬೆದರಿಕೆ ಹಾಕಿದ್ದಾನೆ. ಆಗಸ್ಟ್ 7ರಂದು ಶಿಕ್ಷಕಿಯ ಮಾಜಿ ಪತಿಯೊಂದಿಗೆ ನಡೆದ ಮಾತುಕತೆಯ ಆಡಿಯೋವನ್ನು ವಾಟ್ಸ್‌ಆಪ್ ಮೂಲಕ ಕಳುಹಿಸಿದ್ದಾನೆ.

ಶಿಕ್ಷಕಿಯ ದೂರಿನ ಆಧಾರದ ಮೇಲೆ ಕೊಡುಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Related posts