ಟೆಲಿಗ್ರಾಂನಲ್ಲಿ ಪಾರ್ಟ್‌ಟೈಮ್ ಕೆಲಸದ ಆಮಿಷ – ಮಹಿಳೆಗೆ ₹1.47 ಲಕ್ಷ ವಂಚನೆ
ಟೆಲಿಗ್ರಾಂನಲ್ಲಿ ಪಾರ್ಟ್‌ಟೈಮ್ ಕೆಲಸದ ಆಮಿಷ – ಮಹಿಳೆಗೆ ₹1.47 ಲಕ್ಷ ವಂಚನೆ
ಬೆಂಗಳೂರು ಆಗಸ್ಟ್ 16 2025
ಟೆಲಿಗ್ರಾಂ ಆಮಿಷವೊಡ್ಡಿ ಮಹಿಳೆಯೊಬ್ಬರ ಖಾತೆಯಿಂದ ₹1.47 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಕೊಡುಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಆಗಸ್ಟ್ 11, 2025 ರಂದು CGI Co. Ltd. ಎಂಬ ಐಡಿಯಿಂದ ದೂರುದಾರರಿಗೆ “ಯೂಟ್ಯೂಬ್‌ನಲ್ಲಿ ಸಬ್‌ಸ್ಕ್ರೈಬ್ ಮಾಡಿದರೆ ಹಣ ನೀಡಲಾಗುತ್ತದೆ” ಎಂಬ ಸಂದೇಶವೊಂದು ಬಂದಿತ್ತು. ನಂಬಿದ ಅವರು ಮೊದಲು ನೋಂದಣಿ ಶುಲ್ಕ, ಬಳಿಕ ಜಿ.ಎಸ್.ಟಿ. ಹೆಸರಿನಲ್ಲಿ ಹಣ ವರ್ಗಾಯಿಸಿದರು.
maruthicargo@kphdfc, manasacandu-1@okicici, lucky77chintu-1@okaxis, 9449724415@ptaxis, rahulhaieere@ptyes, sambagottapu@okicici ಸೇರಿದಂತೆ ಹಲವಾರು ಖಾತೆಗಳಿಗೆ ಹಣ ಕಳುಹಿಸಿದ ನಂತರ, ಇದು ವಂಚನೆ ಎಂದು ತಿಳಿದುಬಂದಿತು.
ಒಟ್ಟು ₹1,47,900 ಕಳೆದುಕೊಂಡ ಮಹಿಳೆ, ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
