ಸುದ್ದಿ 

ಚಿನ್ನದ ಸರ ಗಿರವಿ ಇಟ್ಟು ಹಣ ಪಡೆದ ಬಳಿಕ ಹಿಂತಿರುಗಿಸದೇ ಮೋಸ – ಪವನ್‌ಕುಮಾರ್ ವಿರುದ್ಧ ದೂರು

Taluknewsmedia.com

ಬೆಂಗಳೂರು ಆಗಸ್ಟ್ 16 2025

ತುಮಕೂರಿನಲ್ಲಿ ಚಿನ್ನದ ಸರವನ್ನು ಗಿರವಿ ಇಟ್ಟು ಹಣ ಪಡೆದು, ಹಣವನ್ನು ಮರುಪಾವತಿ ಮಾಡಿದ ನಂತರವೂ ಸರವನ್ನು ಹಿಂತಿರುಗಿಸದೇ ಮೋಸ ಮಾಡಿದ ಪ್ರಕರಣದಲ್ಲಿ ವ್ಯಾಪಾರಿಣಿಯೊಬ್ಬರು ವಿದ್ಯಾನಪುರ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಮಹಿಳೆ ಸ್ಟೇಷನರಿ ಅಂಗಡಿ ನಡೆಸುತ್ತಿದ್ದು, ಅವರ ಗಂಡ ಅರುಣ್ ಅವರು ಹಿಂದಿನಲ್ಲಿ ವರಾಹಿ ಗೋಲ್ಡ್ ಬ್ರಿಯರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಕಂಪನಿಯ ಮಾಲೀಕ ಪವನ್‌ಕುಮಾರ್ ಅವರ ಪರಿಚಯವಾಯಿತು.

2025ರ ಫೆಬ್ರವರಿ 27ರಂದು ಮಹಿಳೆ 35.5 ಗ್ರಾಂ ತೂಕದ ಚಿನ್ನದ ಸರವನ್ನು ಗಿರವಿಗೆ ಇಟ್ಟು ₹1 ಲಕ್ಷ ಪಡೆದರು. ನಂತರ 2025ರ ಮೇ 6 ಮತ್ತು 7ರಂದು ಒಟ್ಟು ₹1 ಲಕ್ಷವನ್ನು ಆನ್‌ಲೈನ್ ಮೂಲಕ ಪವನ್‌ಕುಮಾರ್ ಅವರ ಖಾತೆಗೆ ಮರುಪಾವತಿ ಮಾಡಿದರು.

ಆದಾಗ್ಯೂ, ಪವನ್‌ಕುಮಾರ್ ಅವರು ಚಿನ್ನದ ಸರವನ್ನು ಹಿಂತಿರುಗಿಸದೇ ಕಾಲಹರಣ ಮಾಡುತ್ತಿದ್ದು, ಮಹಿಳೆ ಪದೇಪದೇ ಕೇಳಿದ ಮೇಲೂ “ನಿನಗೆ ಒಂದು ಗತಿ ಕಾಣಿಸ್ತೇನೆ” ಎಂದು ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ. ಪವನ್‌ಕುಮಾರ್ ಅವರ ಆಸ್ತಿಗಳು ಪ್ರಕಾಶ್ ಸೌಮ್ಯಾ ಅವರ ಹೆಸರಿನಲ್ಲಿ ಇರುವುದಾಗಿ ದೂರಿದವರು ತಿಳಿಸಿದ್ದಾರೆ.

ವಿದ್ಯಾವಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Related posts