ಸುದ್ದಿ 

ಲಾಭಾಂಶದ ಹೆಸರಿನಲ್ಲಿ ₹48.90 ಲಕ್ಷ ವಂಚನೆ — ಅಸಾಂ ಪಾಷ ವಿರುದ್ಧ ಪ್ರಕರಣ

Taluknewsmedia.com


ಬೆಂಗಳೂರು ಆಗಸ್ಟ್ 16 2025
ಡಿ.ಟಿ.ಎಚ್ ಸರ್ವೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ತಿಂಗಳಿಗೆ ಲಾಭಾಂಶ ನೀಡುವುದಾಗಿ ನಂಬಿಸಿ, ಒಟ್ಟು ₹48.90 ಲಕ್ಷ ಹಣವನ್ನು ಪಡೆದು ವಂಚಿಸಿದ ಘಟನೆ ಭಾರತ್ ನಗರದಲ್ಲಿ ನಡೆದಿದೆ.

ಸಂಪಿಗೆಹಳ್ಳಿ ಪೊಲೀಸರ ಪ್ರಕಾರ, 2024ರ ಆಗಸ್ಟ್‌ನಲ್ಲಿ ಡಿ.ಟಿ.ಎಚ್ ಅಳವಡಿಸಲು ಅಸಾಂ ಪಾಷ ಮನೆಗೆ ಹೋದ ಫಿರ್ಯಾದುದಾರರನ್ನು ಆರೋಪಿಯು ಪರಿಚಯ ಮಾಡಿಕೊಂಡನು. ಅವರ ಜೀವನ ಪರಿಸ್ಥಿತಿ ತಿಳಿದುಕೊಂಡು, ತಿಂಗಳಿಗೆ ₹15 ಸಾವಿರ ಲಾಭಾಂಶ ನೀಡುವುದಾಗಿ ಹೇಳಿ ಹಂತ ಹಂತವಾಗಿ ಹಣ ಸ್ವೀಕರಿಸಿದನು.

ಕೆಲವು ಬಾರಿ ಲಾಭಾಂಶ ನೀಡಿದ ನಂತರ, ಬಂಗಾರ ಅಡಮಾನ, ಬ್ಯಾಂಕ್ ಸಾಲ ಹಾಗೂ ನೇರ ಖಾತೆ ವರ್ಗಾವಣೆಗಳ ಮೂಲಕ ಕೋಟಿಗೂ ಸಮೀಪವಾದ ಹಣವನ್ನು ಪಡೆದುಕೊಂಡು, ಬಳಿಕ ಯಾವುದೇ ಹಣ ಮರಳಿಸದೆ ತಪ್ಪಿಸಿಕೊಂಡಿದ್ದಾನೆ.

ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಾಂ ಪಾಷ ವಿರುದ್ಧ ಮೋಸ ಮತ್ತು ವಂಚನೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Related posts