ಸುದ್ದಿ 

ತಿರುಮೇನಹಳ್ಳಿಯಲ್ಲಿ ಮನೆ ಕಳ್ಳತನ – ಚಿನ್ನ, ಬೆಳ್ಳಿ ಆಭರಣ ದೋಚಾಟ

Taluknewsmedia.com

ಬೆಂಗಳೂರು: ಆಗಸ್ಟ್ 18 2025
ತಿರುಮೇನಹಳ್ಳಿ ಅಗ್ರಹಾರ ಲೇಔಟ್ ಪ್ರದೇಶದಲ್ಲಿ 15 ಆಗಸ್ಟ್ ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗೆ ತೆರಳಿದ್ದ ಕುಟುಂಬ ಮನೆಗೆ ವಾಪಸ್ಸು ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಸಂಪಿಗೆಹಳ್ಳಿ ಪೊಲೀಸರ ಮಾಹಿತಿಯ ಪ್ರಕಾರ, ಮಧ್ಯಾಹ್ನ 12.30 ಗಂಟೆಗೆ ಕುಟುಂಬ ಮನೆಯನ್ನು ಲಾಕ್ ಹಾಕಿಕೊಂಡು ಹೊರಟಿದ್ದು, ಸಂಜೆ 4 ಗಂಟೆಗೆ ವಾಪಸ್ಸು ಬಂದಾಗ ಬೀಗ ಒಡೆದು ಒಳ ಪ್ರವೇಶಿಸಿದ ಕಳ್ಳರು ಮನೆಯ ಬೆಡ್ ರೂಂನಲ್ಲಿದ್ದ ಬೀರುವನ್ನು ಕಬ್ಬಿಣದ ರಾಡ್ ಬಳಸಿ ಒಡೆದು, ಆಭರಣಗಳನ್ನು ಕಳವು ಮಾಡಿದ್ದಾರೆ.

ಕಳುವಾದ ವಸ್ತುಗಳ ವಿವರ:

4 ಚಿನ್ನದ ಉಂಗುರಗಳು

4 ಮಕ್ಕಳ ಚಿನ್ನದ ಉಂಗುರಗಳು

ಚಿನ್ನದ ತಾಳಿ ಮಾದರಿಯ ಡಾಲರ್ – 1

ಬೆಳ್ಳಿಯ ಉಂಗುರಗಳು – 5

ಬೆಳ್ಳಿಯ ಚೈನ್ – 1

ಒಟ್ಟಾರೆ ಸುಮಾರು 17 ಗ್ರಾಂ ಚಿನ್ನ ಹಾಗೂ 20 ಗ್ರಾಂ ಬೆಳ್ಳಿ, ಮೌಲ್ಯ ಸುಮಾರು ₹1.48 ಲಕ್ಷ.

ಈ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ತನಿಖೆ ಆರಂಭಿಸಲಾಗಿದೆ.

Related posts