ಶ್ರೀರಾಮಪುರದಲ್ಲಿ ಮಾದಕ ವಸ್ತು ಪ್ರಕರಣ
ಶ್ರೀರಾಮಪುರದಲ್ಲಿ ಮಾದಕ ವಸ್ತು ಪ್ರಕರಣ
ಬೆಂಗಳೂರು, 18 ಆಗಸ್ಟ್ 2025:
ಸಂಪಿಗೆಹಳ್ಳಿ ಪೊಲೀಸ್ ಠಾಣೆಯ PSI ಕುಪೇಂದ್ರ ಹೆಚ್.ಸಿ. ಅವರ ತಂಡ ಇಂದು ಮಧ್ಯಾಹ್ನ ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್ ಹತ್ತಿರ ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದೆ.
ಸಂಪಿಗೆಹಳ್ಳಿ ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದಾಗ, ನಂಬರ್ ಪ್ಲೇಟ್ ಇಲ್ಲದ Pulsor NS-400 ಬೈಕ್ ಸೀಟ್ ಕೆಳಗಡೆ ಅಡಗಿಸಿದ್ದ 30 ಗ್ರಾಂ ಎಂ.ಡಿ.ಎಂ.ಎ. ಮಾದಕ ವಸ್ತು, ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ, ಕಪ್ಪು ಬಣ್ಣದ ಪೌಚ್ ಹಾಗೂ ಒಪ್ಪೋ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಯಿತು.
ಬಂಧಿತನನ್ನು ವಸೀಂ ಆಕ್ರಮ್ ಅಕಾ ಆರ್ಯನ್ ಎಂದು ಗುರುತಿಸಲಾಗಿದ್ದು, ಆತ ಕಾಲೇಜು ವಿದ್ಯಾರ್ಥಿಗಳು ಮತ್ತು ಐಟಿ/ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದನೆಂಬ ಶಂಕೆ ಇದೆ.
ಸ್ಥಳಕ್ಕೆ ಬಂದ ತಜ್ಞರು ವಶಕ್ಕೆ ಪಡೆದ ವಸ್ತುಗಳನ್ನು ಪರೀಕ್ಷಿಸಿ ಅದು ನಿಷೇಧಿತ ಎಂ.ಡಿ.ಎಂ.ಎ. ಎಂದು ದೃಢಪಡಿಸಿದ್ದಾರೆ.
ಈ ಪ್ರಕರಣವನ್ನು NDPS ಕಾಯ್ದೆ 1985ರ ಕಲಂ 8(4), 22(14) ಅಡಿಯಲ್ಲಿ ದಾಖಲಿಸಲಾಗಿದ್ದು, ಆರೋಪಿಯ ಸಂಪರ್ಕ ವಲಯ ಹಾಗೂ ಮಾದಕ ವಸ್ತುಗಳ ಪೂರೈಕೆ ಜಾಲದ ಕುರಿತು ಸಂಪಿಗೆಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

