ಸುದ್ದಿ 

ಬೆಂಗಳೂರಿನ ತಿಮ್ಮಣ್ಣ ಲೇಔಟ್ ಕೊಡುಗೆ ಹಳ್ಳಿಯಲ್ಲಿ 54 ವರ್ಷದ ಉಮೇಶ್ ಕಾಣೆಯಾದ ಪ್ರಕರಣ

Taluknewsmedia.com

ಬೆಂಗಳೂರು 20 ಆಗಸ್ಟ್ 2025
ತಿಮ್ಮಣ್ಣ ಲೇಔಟ್ ಕೊಡುಗೆಹಳ್ಳಿ ಎಲ್ಲಿ ವಾಸವಿರುವ 54 ವರ್ಷದ ಉಮೇಶ್ ಕಾಣೆಯಾದ ಪ್ರಕರಣ ದಾಖಲಾಗಿದೆ.

ಕೊಡಿಗೆಹಳ್ಳಿ ಪೊಲೀಸರ ಪ್ರಕಾರ, ಯಶಸ್ ವಿ ಅವರು ನೀಡಿದ ಮಾಹಿತಿಯಂತೆ ಉಮೇಶ್ ತಮ್ಮ ಕುಟುಂಬ ಸಮೇತ ನಗರದ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದರು. ಇವರು ಮನೆಯಲ್ಲಿಯೇ ಇರುತ್ತಿದ್ದರೂ, ದಿನಾಂಕ 21-07-2025 ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಮನೆಯಿಂದ ಹೊರಟ ಬಳಿಕ ವಾಪಸ್ ಮನೆಗೆ ಮರಳಿಲ್ಲ.

ಹಿಂದೆಯೂ ಒಮ್ಮೆ ಮನೆಯಿಂದ ಹೊರಟು 15 ದಿನಗಳ ಬಳಿಕ ಮನೆಗೆ ವಾಪಸ್ ಬಂದಿದ್ದರು. ಆದರೆ ಈ ಬಾರಿ 10-08-2025 ರವರೆಗೂ ಕಾಯುತ್ತಿದ್ದರೂ ವಾಪಸ್ ಬಾರದ ಕಾರಣ, ಕುಟುಂಬಸ್ಥರು ಕೊಡುಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಂಧು-ಬಳಗ ಹಾಗೂ ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಕಾಣೆಯಾದ ಉಮೇಶ್ ಅವರ ವಯಸ್ಸು 54 ವರ್ಷ. ಇವರ ಚಹರೆ: ಕೋಲು ಮುಖ, ಬಿಳಿ ಮೈಬಣ್ಣ, ಸಣ ಮೈಕಟ್ಟು, ತಲೆಯ ಕೂದಲು ಸ್ವಲ್ಪ ಕಡಿಮೆ. ಮನೆಯಿಂದ ಹೊರಡುವಾಗ ಬಿಳಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಕಾಣೆಯಾದ ವ್ಯಕ್ತಿಯನ್ನು ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ.

Related posts