ಬೆಂಗಳೂರು: ಕಾರು ಖರೀದಿ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ ನಡೆದಿದೆ
.
ಬೆಂಗಳೂರು 20 ಆಗಸ್ಟ್ 2025
ಶಿವಕುಮಾರ್ ಅವರ ದೂರಿನ ಪ್ರಕಾರ KA03 NB 5558 ನಂಬರಿನ ಕಾರು ಖರೀದಿಸಲು 30-05-2025 ರಂದು ಮಾರಾಟಗಾರ ಶ್ರೀಕಾಂತ್ ಅವರಿಗೆ ₹2.5 ಲಕ್ಷ ಮೊತ್ತವನ್ನು ಪಾವತಿಸಿದ್ದರು. ಉಳಿದ ₹9 ಲಕ್ಷ ನೀಡಿದ ಬಳಿಕ ವಾಹನ ಕೊಡುತ್ತೇನೆ ಎಂದು ಭರವಸೆ ನೀಡಿದರೂ, ಕಾರು ನೀಡದೇ ಹಣವನ್ನೂ ಮರಳಿಸದೇ ಸುಮ್ಮನಾಗಿದ್ದಾರೆ.
ವಿಚಾರಿಸಲು ಕರೆ ಮಾಡಿದಾಗ, ಶ್ರೀಕಾಂತ್ ಅವರು “ಹಣ ಕೊಡೋದಿಲ್ಲ, ಕಾರೂ ಸಿಗೋದಿಲ್ಲ” ಎಂದು ಬೆದರಿಕೆ ಹಾಕಿರುವುದು ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರುದಲ್ಲಿ ಉಲ್ಲೇಖವಾಗಿದೆ.
ಈ ಪ್ರಕರಣದ ಕೊಡುಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ
ಅಪರಿಚಿತರ ಮಾತಿಗೆ ನಂಬಿಕೆ ಇಟ್ಟು ದೊಡ್ಡ ಮೊತ್ತವನ್ನು ಆನ್‌ಲೈನ್ ಮೂಲಕ ಪಾವತಿಸುವ ಮುನ್ನ ದಾಖಲೆಗಳ ಪರಿಶೀಲನೆ ಮಾಡಬೇಕು.

