ಅಫೀಮ್ ಸಾಗಾಟ ಬಯಲು – ಬೈಕ್ ಸಹಿತ ಆರೋಪಿಯ ಬಂಧನ
ಬೆಂಗಳೂರು: 20 ಆಗಸ್ಟ್ 2025
ನಗರದಲ ಬಾಲಾಜಿ ಲೆಹೌಟ್ ಕೊಡಿಗೆಹಳ್ಳಿಲಿ ಮತ್ತೊಂದು ಮಾದಕ ವಸ್ತು ಪ್ರಕರಣ ಬೆಳಕಿಗೆ ಬಂದಿದೆ. ಖಚಿತ ಮಾಹಿತಿಯ ಆಧಾರದ ಮೇಲೆ 18 ಆಗಸ್ಟ್ 2025ರಂದು ಬೆಳಿಗ್ಗೆ 8 ರಿಂದ 9 ಗಂಟೆಯೊಳಗೆ ದಾಳಿ ನಡೆಸಿದ ಕೊಡುಗೆಹಳ್ಳಿ ಪೊಲೀಸರು, ಜಿಜೆ-05 ಎನ್‌ಡಬ್ಲ್ಯೂ-8254 ನಂಬರ್‌ದ ಸೈಂಡರ್ ಪ್ಲಸ್ ಬೈಕ್‌ನಲ್ಲಿ ಅಫೀಮ್ ಸಾಗಿಸುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯ ಬಳಿ ಪತ್ತೆಯಾದ ಅಫೀಮ್ ಸಾರ್ವಜನಿಕರಿಗೆ ಮಾರಾಟ ಮಾಡಲು ತಂದು ಇಟ್ಟಿದ್ದಾನೆ ಎಂದು ಕೊಡುಗೆಹಳ್ಳಿ ಪೊಲೀಸರು ತಿಳಿಸಿದ್ದಾರೆ.
ಬೈಕ್ ಹಾಗೂ ಮಾದಕ ವಸ್ತುಗಳನ್ನು ವಶಕ್ಕೆ ಪಡೆದು, ಆರೋಪಿಯ ವಿರುದ್ಧ NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾದಕ ವಸ್ತು ಪೂರೈಕೆ ಜಾಲದ ಬಗ್ಗೆ ತನಿಖೆ ಮುಂದುವರಿದಿದೆ.
“ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸಿದರೆ ಯಾರನ್ನೂ ಬಿಡುವುದಿಲ್ಲ. ನಗರವನ್ನು ಡ್ರಗ್ ಮುಕ್ತಗೊಳಿಸಲು ಗಟ್ಟಿಯಾದ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

