ಮಾನ್ಯತಾ ಟೆಕ್ ಪಾರ್ಕ್ ಬಳಿ ದ್ವಿಚಕ್ರ ವಾಹನ ಕಳ್ಳತನ
ಬೆಂಗಳೂರು:21 ಆಗಸ್ಟ್ 2025
ನಗರದ ಮಾನ್ಯತಾ ಟೆಕ್ ಪಾರ್ಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ಮೋಟಾರ್‌ಸೈಕಲ್ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಸಂಪಿಗೆಹಳ್ಳಿ ಪೊಲೀಸರ ಮಾಹಿತಿಯ ಪ್ರಕಾರ, ದೂರುದಾರರು ಪ್ರಂಬರ್ ಕೆಲಸ ಮಾಡಿಕೊಂಡಿದ್ದು, ಆಗಸ್ಟ್ 18, 2025ರಂದು ಮಧ್ಯಾಹ್ನ 12:30ರ ಸಮಯದಲ್ಲಿ ತಮ್ಮ TVS Raider (ವಾಹನ ಸಂಖ್ಯೆ: AP40C1085) ಮೋಟಾರ್‌ಸೈಕಲ್‌ನ್ನು ನಿಲ್ಲಿಸಿ ಕೆಲಸಕ್ಕೆ ತೆರಳಿದ್ದರು. ಆದರೆ, ಮಧ್ಯಾಹ್ನ 3 ಗಂಟೆಗೆ ವಾಪಸ್ಸಾದಾಗ ವಾಹನ ಸ್ಥಳದಲ್ಲಿರದೆ ಕಾಣೆಯಾಗಿದೆ.
ಕಳ್ಳತನವಾದ ಮೋಟಾರ್‌ಸೈಕಲ್ ವಿವರಗಳು:
ಮಾದರಿ: TVS Raider (2023)
ವಾಹನ ಸಂಖ್ಯೆ: AP40C1085
ಎಂಜಿನ್ ಸಂಖ್ಯೆ: AF9DP1707709
ಚ್ಯಾಸಿಸ್ ಸಂಖ್ಯೆ: MD625AF94P1D08312
ಬಣ್ಣ: ನೀಲಿ
ಮೌಲ್ಯ: ಸುಮಾರು ₹80,000
ಎಲ್ಲೆಡೆ ಹುಡುಕಿದರೂ ವಾಹನ ಪತ್ತೆಯಾಗದೆ, ಯಾರೋ ಕಳ್ಳರು ಮೋಟಾರ್‌ಸೈಕಲ್ ಕಳವು ಮಾಡಿಕೊಂಡು ಹೋಗಿದ್ದಾರೆಂದು ದೂರುದಾರರು ಸಂಪಿಗೆಹಳ್ಳಿ ಪೊಲೀಸರಿಗೆ ತಿಳಿಸಿದ್ದಾರೆ

