ಯಲಹಂಕದಲ್ಲಿ ಸರ್ಕಾರಿ ಜಮೀನಿನಲ್ಲಿನ ನೀಲಗಿರಿ ಮರಗಳ ಅಕ್ರಮ ಕಡಿತ
ಯಲಹಂಕದಲ್ಲಿ ಸರ್ಕಾರಿ ಜಮೀನಿನಲ್ಲಿನ ನೀಲಗಿರಿ ಮರಗಳ ಅಕ್ರಮ ಕಡಿತ
ಬೆಂಗಳೂರು: 21 ಆಗಸ್ಟ್ 2025
ಯಲಹಂಕ ಉಪವಿಭಾಗದಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನೀಲಗಿರಿ ಮರಗಳನ್ನು ಕಡಿದು ಸಾಗಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ರೆವೆನ್ಯೂ ಇನ್ಸ್‌ಪೆಕ್ಟರ್ ಶ್ರೀಮತಿ ಉಷಾ ಎಲ್. ಅವರ ವರದಿ ಪ್ರಕಾರ, ಚಂದ್ರಶೇಖರ್ ಬಿನ್ ಲೇಟ್ ಪಿಳ್ಳಪ್ಪ ಮತ್ತು ತುಳಸಿರಾಮ್ ಬಿನ್ ಲೇಟ್ ಹಿಪ್ ಎಂಬುವವರು ಯಾವುದೇ ಅನುಮತಿ ಇಲ್ಲದೆ ಸರ್ಕಾರಿ ಜಮೀನಿನಲ್ಲಿದ್ದ ಸುಮಾರು 200–250 ನೀಲಗಿರಿ ಮರಗಳನ್ನು 2 ಎಕರೆ ಪ್ರದೇಶದಲ್ಲಿ ರಾತ್ರಿ ವೇಳೆ ಕಡಿದು ಸಾಗಿಸಿದ್ದಾರೆ.
ದಾಖಲೆಗಳ ಪ್ರಕಾರ, ಡ/340/15-16, ದಿನಾಂಕ 30/11/2015 ರಂದು ಸುಮಾರು 12 ಎಕರೆ ಜಮೀನನ್ನು ಅನಧಿಕೃತವಾಗಿ ದಾಖಲಾಗಿದ್ದರಿಂದ, ಆ ಪಹಣಿಯನ್ನು ರದ್ದುಪಡಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿತ್ತು. ನಂತರ ಈ ಜಮೀನನ್ನು ಶ್ಯಾಸಾ ಫೌಂಡೇಶನ್ ಗೆ ಮಂಜೂರು ಮಾಡುವ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಇದುವರೆಗೂ ಯಾರಿಗೂ ಮಂಜೂರಾಗಿಲ್ಲ.
ಇದರಿಂದ ಸರ್ಕಾರಿ ಜಮೀನಿನಲ್ಲಿರುವ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿರುವ ಪ್ರಕರಣದಲ್ಲಿ ಆರೋಪಿಗಳಾದ ಚಂದ್ರಶೇಖರ್ ಮತ್ತು ತುಳಸಿರಾಮ್ ವಿರುದ್ಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಂಬಂಧಪಟ್ಟ ಇಲಾಖೆಯವರು ತನಿಖೆ ಆರಂಭಿಸಿದ್ದಾರೆ

