ಸುದ್ದಿ 

ಗ್ರಾಮ ಭಾರತಿ ಟ್ರಸ್ಟ್ ಮತ್ತು ಮುಳಬಾಗಿಲು ಫುಡ್ ಬ್ಯಾಂಕ್ ಅರ್ ಎಲ್ ಜಾಲಪ್ಪ ಮೊಬೈಲ್ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರೀಕರ..

Taluknewsmedia.com

ಮುಳಬಾಗಿಲು: ಮನುಷ್ಯ ಆರೋಗ್ಯದ ಕೊರತೆ ಉಂಟಾದಾಗ ಮಾತ್ರ ಅದು ಎಷ್ಟು ಮುಖ್ಯ ಎಂಬುದು ಅರಿವಾಗುತ್ತದೆ ಎಂದು ಮುಳಬಾಗಿಲು ಫುಡ್ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಕೃಷ್ಣಮೂರ್ತಿ ಹೇಳಿದರು ನಗರದ ಎಸ್ ಬಿ ಐ ಬ್ಯಾಂಕ್ ಮುಂದೆ ಗ್ರಾಮ ಭಾರತಿ ಟ್ರಸ್ಟ್ ಮತ್ತು ಮುಳಬಾಗಿಲು ಫುಡ್ ಬ್ಯಾಂಕ್ ಅರ್ ಎಲ್ ಜಾಲಪ್ಪ ಮೊಬೈಲ್ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ನಾಗರಿಕರಿಗೆ ಅನೇಕ ಸೌಲಭ್ಯ ಒದಗಿಸಿದೆ. ಜತೆಗೆ ಅವರಿಗಾಗಿಯೇ ಆರೋಗ್ಯ ಭದ್ರತೆ ಒದಗಿಸಿದೆ. ಆದರೆ,ಹಿರಿಯ ನಾಗರಿಕರ ತಮ್ಮ ಜೀವನ ಕೊನೆಗಳಿಗೆಗೆ ಬೇಕಾದ ಅವಶ್ಯಕತೆಗಳಿಗೆ ಮಕ್ಕಳು ಭದ್ರತೆಯಾಗಬೇಕು ಎಂದರು.ಅನೇಕ ಪ್ರಕರಣದಲ್ಲಿ ಮಕ್ಕಳು ಪೋಷಕರಿಂದ ಅವರ ಅಸ್ತಿ, ಅಂತಸ್ತನ್ನು ತಮ್ಮ ಹೆಸರಿಗೆ ವರ್ಗಾಹಿಸಿಕೊಂಡು ಕೊನೆಗೆ ಅವರನ್ನು ಬೀದಿಗೆ ತಳ್ಳುವ ನೂರಾರು ಘಟನೆಗಳು ಈಗಾಗಲೇ ನಡೆದಿದೆ. ಈ ಬಗ್ಗೆ ಹಿರಿಯ ನಾಗರೀಕರು ಎಚ್ಚರಿಕೆ ವಹಿಸಬೇಕು ಎಂದು ಕಿವಿ ಮಾತು ಹೇಳಿದರು.

ಹಿರಿಯರು ಹಾಸಿಗೆ ಹಿಡಿದರೆ ಯುವಕರು, ಅವರ ಸಂಬಂಧಿಕರು ಕೂಡ ನಿರ್ಲಕ್ಷ್ಯ ವಹಿಸುತ್ತಾರೆ. ಅವರ ಸಹಾಯಕ್ಕೆ ಯಾರು ಬರುವುದಿಲ್ಲ. ಇದು ಅವರ ದೈಹಿಕಕ್ಕಿಂತ ಮಾನಸಿಕವಾಗಿ ತುಂಬಾ ಘಾಸಿ ಉಂಟಾಗುತ್ತದೆ. ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವುದು. ಪ್ರೀತಿಯಿಂದ ನೋಡಿಕೊಳ್ಳುವುದು, ನೆಮ್ಮದಿ ಜೀವನಕ್ಕೆ ಸಹಕರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ವೃದ್ದರಾದ ಕಾರಣಕ್ಕೆ ಪೋಷಕರ ಬಗ್ಗೆ ನಿರ್ಲಕ್ಷ್ಯ ತೋರುವುದು. ಅವರನ್ನು ವೃದ್ದಾಶ್ರಮಕ್ಕೆ ಸೇರಿಸುವುದು, ಕಿರುಕುಳ ನೀಡುವುದು ಮಾಡಬಾರದು. ಮನುಷ್ಯ ಹೆಚ್ಚಿನ ವಿದ್ಯಾಭ್ಯಾಸ ಪಡೆಯುತ್ತಿರುವ ಇಂದಿನ ಕಾಲದಲ್ಲಿ ವೃದ್ಧಾಶ್ರಮ ಸೇರುತ್ತಿರುವ ಪೋಷಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮಕ್ಕಳನ್ನು ಬೆಳೆಸುವುದಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದ ಪೋಷಕರ ಕಡೆಗಣನೆ ಮನುಷ್ಯತ್ವಕ್ಕೆ ವಿರುದ್ಧವಾಗಿದ್ದು, ಅವರು ಮಾಡಿದ ಆಸ್ತಿ, ಅಂತಸ್ತುಗಳಿಗಾಗಿ ಹೊಡೆದಾಡುವ ಅನೇಕ ಮಕ್ಕಳಿದ್ದಾರೆ. ಆದರೆ, ತಂದೆ-ತಾಯಿಯನ್ನೇ ಆಸ್ತಿಯಾಗಿ ಕಂಡವರ ಸಂಖ್ಯೆ ಬೆರಳಣಿಕೆಯಷ್ಟಿದೆ ಎಂದರು. ಸಾಕಿ ಸಲುಹಿಸಿ ಶಿಕ್ಷಣ ಕೊಡಿಸುವಲ್ಲಿ ಪೋಷಕರು ಪಟ್ಟ ಕಷ್ಟಗಳನ್ನು ಮಕ್ಕಳು ಮರೆಯಬಾರದು. ಎಷ್ಟೇ ಕಷ್ಟಗಳಿದ್ದರು ಅವುಗಳನ್ನು ಮಕ್ಕಳಿಗೆ ತೋರಿಸದೇ ಬೆಳೆಸಿರುತ್ತಾರೆ. ತಾವೂ ಕಷ್ಟ ಪಟ್ಟು ಮಕ್ಕಳನ್ನು ಬಹು ಪೀತಿಯಿಂದ ಸಾಕುತ್ತಾರೆ. ಅಷ್ಟೇ ಪ್ರೀತಿಯನ್ನು ಅವರು ವೃದ್ದರಾದಾಗ ಮಕ್ಕಳು ತೋರಿಸಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು. ಶಿಬಿರದಲ್ಲಿ ಬಿಪಿ ಮಧುಮೇಹ ಕಣ್ಣು ಮೂಗು ಮೈ ಕೈ ನೋವುಗ ಳಿಗೆ 150 ಹಿರಿಯ ನಾಗರೀಕರು ಶಿಬಿರವನ್ನು ಸದುಪಯೋಗಪಡಿಸಿಕೊಂಡು

.ಇದೇ ಸಂದರ್ಭದಲ್ಲಿ ಆರೋಗ್ಯ ಶಿಬಿರದಲ್ಲಿ ಹಿರಿಯ ನಾಗರೀಕರಿಗೆ ಆರೋಗ್ಯ ಗುರುತಿನ ಚೀಟಿ, ಉಚಿತ ಔಷದಿ ವಿತರಿಸಲಾಯಿತು. ಪ್ಯಾರಾ ಮಿಲಿಟರಿ ಅಧ್ಯಕ್ಷರು ನಿವೃತ್ತ ಯೋಧರು ಕೆವಿ. ಮೂರ್ತಿ ಮತ್ತು ಜಾಲಪ್ಪ ಆಸ್ಪತ್ರೆ ಸಿಬ್ಬಂದಿ ವರ್ಗ ಇದ್ದರು.

Related posts