ಆನ್‌ಲೈನ್ ಹೂಡಿಕೆ ಮೋಸ – ಯುವಕನಿಗೆ ರೂ.2.53 ಲಕ್ಷ ನಷ್ಟ
ಬೆಂಗಳೂರು:23 ಆಗಸ್ಟ್ 2025
ಆನ್‌ಲೈನ್‌ನಲ್ಲಿ ಸುಲಭ ಲಾಭದಾಸೆ ಜಾಹೀರಾತಿಗೆ ಮರುಳಾದ ಯುವಕನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ವರದಿಯಾಗಿದೆ.
ಶಶಿಕುಮಾರ್ ಅವರ ಹೇಳಿಕೆಯ ಪ್ರಕಾರ, 21-08-2025 ರಂದು http://hot.mkprosty/epromotions ಎಂಬ ಲಿಂಕ್ ಮೂಲಕ “ಹೂಡಿಕೆ ಮಾಡಿದರೆ 30% ಲಾಭ ದೊರೆಯುತ್ತದೆ” ಎಂಬ ಜಾಹೀರಾತನ್ನು ನೋಡಿ ನಂಬಿ, ತನ್ನ ICICI ಬ್ಯಾಂಕ್, SBI ಬ್ಯಾಂಕ್ ಮತ್ತು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಖಾತೆಗಳಿಂದ ಒಟ್ಟು ರೂ.2,53,000/- ಹಣ ವರ್ಗಾವಣೆ ಮಾಡಿದ್ದಾರೆ.
ಆದರೆ ಹೂಡಿಕೆ ಮಾಡಿದ ನಂತರ ಯಾವುದೇ ಲಾಭ ನೀಡದೆ ಹಣ ವಾಪಸು ಕೊಡದೇ ತಲೆಮರೆಸಿಕೊಂಡ ಆರೋಪಿಗಳ ವಿರುದ್ಧ ಶಶಿಕುಮಾರ್ ಅವರು ಕೊಡುಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆನ್‌ಲೈನ್ ಹೂಡಿಕೆ ಮೋಸದ ಕುರಿತು ತನಿಖೆ ಕೈಗೊಂಡಿದ್ದಾರೆ

