ಸುದ್ದಿ 

ಬೆಂಗಳೂರಿನ ಸಹಕಾರನಗರದಲ್ಲಿ 34 ವರ್ಷದ ವ್ಯಕ್ತಿ ಕಾಣೆ

Taluknewsmedia.com


ಬೆಂಗಳೂರು 23 ಆಗಸ್ಟ್ 2025
ಸಹಕಾರನಗರದಲ್ಲಿ 34 ವರ್ಷದ ಕೃಪ ಎಂಬ ವ್ಯಕ್ತಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕುಟುಂಬದವರ ಮಾಹಿತಿಯಂತೆ, ಆಗಸ್ಟ್ 19, 2025 ರಂದು ಮಧ್ಯಾಹ್ನ 12 ಗಂಟೆಗೆ ಗಾರೆ ಕೆಲಸಕ್ಕಾಗಿ ಸಹಕಾರನಗರಕ್ಕೆ ತೆರಳಿದ ಕೃಪ ಅವರು ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಆಕಸ್ಮಿಕವಾಗಿ ಕೈ ತಾಗಿದ್ದು, ಆಕೆ 112 ತುರ್ತು ಸೇವೆಗೆ ಕರೆ ಮಾಡಿ ದೂರು ನೀಡಿದರು.

ಸ್ಥಳಕ್ಕೆ ಕೊಡಿಗೆಹಳ್ಳಿ ಪೊಲೀಸರು ಬಂದು ವಿಚಾರಣೆ ನಡೆಸುತ್ತಿದ್ದಾಗ ಭಯಗೊಂಡ ಕೃಪ ಓಡಿ ಹೋಗಿದ್ದು, ನಂತರ ಮನೆಗೆ ಮರಳಲಿಲ್ಲ. ಹಲವೆಡೆ ಹುಡುಕಿದರೂ ಅವರ ಪತ್ತೆಯಾಗಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

ಕೃಪ ಅವರ ಲಕ್ಷಣಗಳು: ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, 5 ಅಡಿ ಎತ್ತರ. ಅವರು ಕನ್ನಡ, ತೆಲುಗು ಹಾಗೂ ತಮಿಳು ಮಾತನಾಡಲು ಬಲ್ಲವರು. ಕಾಣೆಯಾಗುವ ವೇಳೆ ಪರ್ಪಲ್ ಬಣ್ಣದ ಶರ್ಟ್ ಮತ್ತು ಗ್ರೇ ಬಣ್ಣದ ಪ್ಯಾಂಟ್ ಧರಿಸಿದ್ದರು.

ಕೊಡುಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Related posts