ಕೊಡಿಗೆಹಳ್ಳಿ ವೇಶ್ಯಾವಾಟಿಕೆ ದಂಧೆ – ಮಹಿಳಾ ಸಂರಕ್ಷಣಾ ದಳದ ದಾಳಿ
ಬೆಂಗಳೂರು:23 ಆಗಸ್ಟ್ 2025
ಬೆಂಗಳೂರು ನಗರದ ಕೊಡಿಗೆಹಳ್ಳಿಯಲ್ಲಿ ನಡೆಯುತ್ತಿದ್ದ ಅಕ್ರಮ ವೇಶ್ಯಾವಾಟಿಕೆ ದಂಧೆಯನ್ನು ಪತ್ತೆಹಚ್ಚುವಲ್ಲಿ ಸಿಸಿಬಿ ಮಹಿಳಾ ಸಂರಕ್ಷಣಾ ದಳ ಯಶಸ್ವಿಯಾಗಿದೆ.
2025ರ ಆಗಸ್ಟ್ 22ರಂದು ಸಂಜೆ 5.15ರ ಸುಮಾರಿಗೆ, ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಕೊಡುಗೆಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ಪ್ರೈ ಅವರು ನೀಡಿದ ಮಾಹಿತಿಯ ಮೇರೆಗೆ, ಕೊಡಿಗೆಹಳ್ಳಿಯ ವಿದ್ಯಾರಣ್ಯಪುರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಯಿತು.
ಪದ್ಮಾ (ಲೇಟ್ ಹೇಮಂತ್ ಕುಮಾರ್), ನಿವಾಸಿ – ನಂ.118, ವಿದ್ಯಾರಣ್ಯಪುರ, ಬೆಂಗಳೂರು, ಅವರು ತಮ್ಮ ಮನೆಯನ್ನು ಬಾಡಿಗೆಗೆ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರೆಂದು ಪತ್ತೆಯಾಗಿದೆ. ತನಿಖೆಯ ಪ್ರಕಾರ, ಅವರು ತಮ್ಮ ಮೊಬೈಲ್ ನಂಬರ್ 87929 79435 ಮುಖಾಂತರ ಗಿರಾಕಿಗಳನ್ನು ಸಂಪರ್ಕಿಸಿ, ಹೆಚ್ಚಿನ ಹಣ ಪಡೆದು ಸ್ಥಳೀಯ ಹಾಗೂ ಹೊರರಾಜ್ಯದ ಮಹಿಳೆಯರನ್ನು ಪುಸಲಾಯಿಸಿ, ಅಕ್ರಮ ವೇಶ್ಯಾವಾಟಿಕೆಗೆ ಒದಗಿಸುತ್ತಿದ್ದರು.
ಅವರ ವಿರುದ್ಧ ಐಟಿಪಿ ಕಾಯ್ದೆ ಕಲಂ 3, 4, 5 ಹಾಗೂ ಬಿ.ಎನ್.ಎಸ್ 143(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರನ್ನು ರಕ್ಷಿಸಿ ಪುನರ್ವಸತಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
ಈ ದಾಳಿಯಿಂದ ಸಿಸಿಬಿ ಮಹಿಳಾ ಸಂರಕ್ಷಣಾ ದಳವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಮತ್ತೊಂದು ಹೆಜ್ಜೆ ಇಟ್ಟಿದೆ.

