ಸುದ್ದಿ 

ಹಾನಗಲ್ ನಲ್ಲಿ ಅಕ್ರಮ ಗಾಂಜಾ ಮಾರಾಟ.

Taluknewsmedia.com

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಾದ್ಯಂತ ಇತ್ತೀಚಿಗೆ ಗಾಂಜಾ ಹಾವಳಿ ಹೆಚ್ಚಾಗಿದ್ದು ಆಗಸ್ಟ್ 17ನೆ ತಾರಿಕಿನಂದು ಹಾನಗಲ್ ತಾಲೂಕಿನ ಅಕ್ಕಿಆಲೂರಿನ ಬಳಿ ದೊಡ್ಡ ಪ್ರಮಾಣದ ಅಕ್ರಮ ಗಾಂಜಾ ಪತ್ತೆಯಾಗಿದೆ

17/08/2025 ರಂದು ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದ ದನದ ಮಾರುಕಟ್ಟೆಯ ಹತ್ತಿರದ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಸಾಯಂಕಾಲ 7ಗಂಟೆಯ ಸುಮಾರಿಗೆ ಓಪನ್ ಮಾರ್ಕೆಟ್ ಗಾಂಜಾ ದಂದೆ ಬಯಲಿಗೆ ಬಂದಿದೆ ಅದರಲ್ಲಿ ಮುಖ್ಯವಾಗಿ ಇದ್ದವರು ಮುಬಾರಕ್ ಗೌಸ್ಮುದ್ದಿನ ಮಕಂದ್ ರ್,ಮುಕ್ತಿಯಾರ್ ಮೊಹಮದಜಾಫರ್ ಮಕಂದರ್, ಮೊಹಮದ್ಫ್ಜಲ್ ನಿಜಾಮುದ್ದೀನ್ ಪೆಂಡಾರಿ, ಮೊಹಮದ್ ಸಾದಿಕ್ ಅನ್ವರಸಾಬ್ ಸುಂಕದ
ಈ ಮೇಲೆ ಕಾಣಿಸುವ 4 ಆರೋಪಿಗಳು ಪ್ರಮುಖವಾಗಿ ಅಕ್ರಮವಾಗಿ ಓಪನ್ ಮಾರ್ಕೆಟ್ ರೀತಿ ಗಾಂಜಾ ಮಾರಾಟ ಮಾಡುತ್ತಿದ್ದದ್ದು ಇವರು 3ಕೆಜಿ 78ಗ್ರಾಂ ಅಂದರೆ 1 ಲಕ್ಷ 20 ಸಾವಿರ ರೂಪಾಯಿ ಗಾಂಜಾ ಮಾಲು ಮಾರಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ ಇದರ ಮುಂದಾಲೋಚನೆ ತಿಳಿದ ಹಾನಗಲ್ ನಗರದ ಪೊಲೀಸರು ತಕ್ಷಣ ಸ್ಥಳಕ್ಕೆ ಹೋಗಿ ರೇಡ್ ಮಾಡಿದ್ದಾರೆ ಸ್ವತಃ ಹಾನಗಲ್ ನಗರದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂಪತ್ ಎಸ್ ಅನೀಕಿವಿ ಅವರು ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ಈ ಬಗ್ಗೆ ಹಾನಗಲ್ ಇತ್ತೀಚಿಗೆ ಗಾಂಜಾ ಹಬ್ ಆಗುತ್ತಿದೆ ಯುವ ಜನತೆ ಇದಕ್ಕೆ ಬಲಿಪಶು ಆಗುತ್ತಿದ್ದಾರೆ ಹಾನಗಲ್ ನಗರದಲ್ಲಿ ಗಾಂಜಾ ಅಕ್ರಮ ಮಾರಾಟದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಜನರಲ್ಲಿ ವಿಶ್ವಾಸ ಮೂಡಿಸಿದ್ದಾರೆ.

: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691

Related posts