ಹಾನಗಲ್ ತಾಲೂಕಿನ ಇನಾಂ ನಿರಲಗಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ವ್ಯಕ್ತಿ ದುರ್ಮರಣ
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಇನಾಂ ನಿರಲಗಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಹೊಲದಲ್ಲಿ ವಿದ್ಯುತ್ ತಂತಿ ತಗುಲಿ ದುರ್ಮರಣವಾಗಿದೆ
ದಿನಾಂಕ:27/08/2025 ರಂದು ಮುಂಜಾನೆ: 04-30 ಗಂಟೆಯಿಂದ ಮುಂಜಾನೆ: 06-00 ಗಂಟೆಯ ನಡುವಿನ ಅವಧಿಯಲ್ಲಿ ಇನಾಂ ನೀರಲಗಿ ಗ್ರಾಮದ ಪ್ರಭು ಚನ್ನಪ್ಪ ಹಾವೇರಿ ಹಾಗು ಅಭಿ ಫಕ್ಕೀರಪ್ಪ ಶಿಗ್ಗಾಂವಿ ಇವರು ಸಾ” ಇನಾಂ ನಿರಲಗಿ ಇವರ ಜಮೀನಿಗೆ ಮೃತ ಅಣ್ಣಪ್ಪ ಕ್ಯಾಸನೂರ ಮತ್ತು ಗಾಯಾಳು ಮಂಜುನಾಥ ಸಿದ್ದಮ್ಮನವರ ಸಾ:ಇನಾಂನೀಲರಲಗಿ ತಾ:ಹಾನಗಲ್ಲ ಇವರು ಇಬ್ಬರು ಬೆಳಗಿನಜಾವ ಗಣಪತಿ ಮಂಟಪಕ್ಕೆ ಅಲಂಕಾರ ಮಾಡಲು ಮಾವಿನ ತೋರಣ ಮತ್ತು ಗೋವಿನ ಜೋಳದ ತೆನೆ, ಬಾಳೆ ದಿಂಡನ್ನು ತರಲು ಜಮೀನಿಗೆ ಹೋಗಿದ್ದು ಆರೋಪಿತರಾದ ಪ್ರಭು ಹಾವೇರಿ ಮತ್ತು ಅಭಿ ಶಿಗ್ಗಾಂವ ಇವರ ಕೂಡಿಕೊಂಡು ತಮ್ಮ ಜಮೀನಿನಲ್ಲಿ ವಿದ್ಯುತ್ ತಂತಿಯನ್ನು ಏಳೆದರೆ ಜೀವಹಾನಿ ಸಂಬವಿಸುತ್ತದೆ ಅಂತಾ ಗೊತ್ತಿದ್ದರೂ ಕೂಡಾ ತಮ್ಮ ಗೋವಿನ ಜೋಳ ಜಮೀನಿನಲ್ಲಿ ಇರುವ ಜೋಡು ವಿದ್ಯುತ್ ಟಿ.ಸಿ.ಯಿಂದ ಕಂಬದಿಂದ ಅನದೀಕೃತವಾಗಿ ವಿದ್ಯುತ್ ತಂತಿಯನ್ನು ಗೋವಿನ ಜೋಳದ ಜಮೀನಿನಲ್ಲಿ ಏಳೆದಿದ್ದು, ವಿದ್ಯುತ್ ತಂತಿಯನ್ನು ನೆಟ್ಟಿರುವ ಗೂಟಕ್ಕೆ ತಂತಿಯನ್ನು ಸುತ್ತಿ ಕಾಡು ಪ್ರಾಣಿಗಳು ತಮ್ಮ ಹೋಲಕ್ಕೆ ಬರಬಾರದು ಅಂತಾ ತಂತಿಗೆ ಅನಧೀಕೃತವಾಗಿ ವಿದ್ಯುತ್ ಶಾಖವನ್ನು ಹರಿಸಿದ್ದು, ವಿದ್ಯುತ್ ತಂತಿಯ ಶಾಖವು ಗಾಯಾಳು ಮಂಜುನಾಥ ಈತನ ಕಾಲಿಗೆ ತಗುಲಿ ಗಾಯಗೊಂಡಿದ್ದು ಮತ್ತು ಮೃತ ಅಣ್ಣಪ್ಪ ಈತನ ಕಾಲಿಗೆ ವಿದ್ಯುತ್ ಶಾಖ ತಗುಲಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದೆ ಇದರ ಬಗ್ಗೆ ಪಡವೇಶಪ್ಪ ಕ್ಯಾಸನೂರು ಎಂಬ ಮೃತನ ಆಪ್ತರು ಹಾನಗಲ್ ಪೊಲೀಸ್ ಠಾಣೆಗೆ ಹೊಲಕ್ಕೆ ತಂತಿ ಹೇಳದ ಪ್ರಭು ಹಾಗು ಅಭಿ ಶಿಗ್ಗಾಂವಿ ಇವರ ವಿರುದ್ಧ ದೂರು ದಾಖಲಿಸಿದ್ದಾರೆ
: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691
https://taluknewsmedia.com/PRAMODJANAGERI.html

