ಸುದ್ದಿ 

ಬೆಂಗಳೂರು ಅಪಘಾತ – ಗಾರೆ ಕಾರ್ಮಿಕನ ಸಾವು

Taluknewsmedia.com

ಬೆಂಗಳೂರು 30 ಆಗಸ್ಟ್ 2025
ನಗರದ ಸಂಪಿಗೆಹಳ್ಳಿ ಮುಖ್ಯರಸ್ತೆಯಲ್ಲಿರುವ ಸೋವೆನ್ ಸಾಚಿ ಅಪಾರ್ಟಮೆಂಟ್ ನಿರ್ಮಾಣ ಕಾರ್ಯ ನಡೆಯುತ್ತಿರುವ ವೇಳೆ ದುರಂತ ಸಂಭವಿಸಿದೆ. ಉಮಿಯಾ ಕನ್‌ಸ್ಟ್ರಕ್ಷನ್ ಲಿಮಿಟೆಡ್ ಕಂಪೆನಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಸಕಾಲ್ ದಾಸ್ (37) ಹಾಗೂ ನೀರಜ್ ಕುಮಾರ್ (22) ರವರು 27-08-2025 ರಂದು 6ನೇ ಮಹಡಿಯಲ್ಲಿ ಗೋಡೆ ಕೆಲಸ ಮಾಡುತ್ತಿದ್ದಾಗ ಅಕಸ್ಮಿಕವಾಗಿ ಬಾಲ್ಕನಿ ಸಾಬ್ ಕುಸಿದು ಬಿದ್ದಿದೆ.

ಘಟನೆಯಲ್ಲಿ ಸಕಾಲ್ ದಾಸ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ನೀರಜ್ ಕುಮಾರ್ ಅವರಿಗೆ ಬೆನ್ನು, ಕೈ, ಕಾಲುಗಳಿಗೆ ತೀವ್ರ ಗಾಯವಾಗಿದ್ದು, ಪ್ರಸ್ತುತ ಯಲಹಂಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಯ ಕುರಿತು ಸುರೇಶ್ ಕುಮಾರ್ ಅವರು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಂಪನಿಯ ಸಿವಿಲ್ ಎಂಜಿನಿಯರ್ ಆಸೀಪ್ ನಾಯ್ಕ, ಪ್ರಾಜೆಕ್ಟ್ ಮ್ಯಾನೇಜರ್ ಶೈಲೇಶ್, ಸೆಂಟ್ರಿಂಗ್ ಮಸ್ಕಿ ಸಮೀರ್ ಮತ್ತು ಲೇಬರ್ ಕಾಂಟ್ರಾಕ್ಟರ್ ಚಿತ್ರರಂಜನ್ ರವರು ಯಾವುದೇ ಭದ್ರತಾ ಕ್ರಮಗಳನ್ನು ಅನುಸರಿಸದೇ, ಕಾರ್ಮಿಕರಿಗೆ ಬೆಲ್ಟ್, ಹೆಲ್ಮೆಟ್, ಸೆಫ್ಟಿ ನೆಟ್ ಒದಗಿಸದೇ ನಿರ್ಲಕ್ಷ್ಯ ವಹಿಸಿದ ಕಾರಣ ದುರಂತ ಸಂಭವಿಸಿದೆ ಎಂದು ಆರೋಪಿಸಲಾಗಿದೆ.

ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related posts