ಸುದ್ದಿ 

ಭೂಮಿ ವಂಚನೆ ಪ್ರಕರಣ – ದೇವನಹಳ್ಳಿ ನ್ಯಾಯಾಲಯ ಆದೇಶದಂತೆ FIR ದಾಖಲು

Taluknewsmedia.com

ದೇವನಹಳ್ಳಿ ನ್ಯಾಯಾಲಯದ ಆದೇಶದ ಮೇರೆಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಭೂಮಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿದೆ.

ಪ್ರಭಾಕರ ರವರ ದೂರಿನ ಪ್ರಕಾರ, ಅವರ ತಾತ ಶ್ರೀ ತಮ್ಮಣ (ತಿಮ್ಮಸಂದ್ರ ಗ್ರಾಮದವರು) ಅವರು 1983ರಲ್ಲಿ ನಿಧನರಾದರು. ನಂತರ ಪಿರ್ಯಾದುದಾರರ ಚಿಕ್ಕಪ್ಪ ಕೃಷ್ಣಪ್ಪ ಹಾಗೂ ಅವರ ಮಕ್ಕಳು ಆಸ್ತಿಗೆ ಸಂಬಂಧಿಸಿದಂತೆ ದೇವನಹಳ್ಳಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು (O.S No.2184/2006). ಕೃಷ್ಣಪ್ಪರು 2013ರಲ್ಲಿ ಮೃತಪಟ್ಟ ನಂತರ, ಅವರ ಮಗ ಹರಿಪ್ರಸಾದ್ ಪ್ರಭಾಕರರಿಗೆ ಸಮಪಾಲು ನೀಡುವುದಾಗಿ ಭರವಸೆ ನೀಡಿದ್ದರೂ, ನಂತರ ಪಾಲು ನೀಡದೆ ಇದ್ದಾರೆ.

ಪ್ರಭಾಕರರು ಕೋರ್ಟ್ ಮುಖಾಂತರ ಹರಿಪ್ರಸಾದ್ ಅವರಿಗೆ ಲೀಗಲ್ ನೋಟೀಸ್ ಕಳುಹಿಸಿದಾಗ, ಹರಿಪ್ರಸಾದ್ ಅವರು ಆ ಜಮೀನನ್ನು ರಾಜೇಂದ್ರ ಪ್ರಸಾದ್ ಹಾಗೂ ಶ್ರೀರಾಜ್ ಪುರುಷೋತ್ತಮನ್ ರವರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ದಾಖಲೆಗಳ ಪರಿಶೀಲನೆಯಲ್ಲಿ, ದಿನಾಂಕ 08/09/2011 ರಂದು ತುಪ್ಪ ಕ್ರಯದ ಕರಾರು ಹಾಗೂ 09/09/2011 ರಂದು ಶುದ್ಧ ಕ್ರಯ ಪತ್ರ ಚಿಕ್ಕಬಾಳ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಾಯಿಸಿರುವುದು ಪತ್ತೆಯಾಗಿದೆ.

ಆದರೆ ಈ ಖರೀದಿ-ಮಾರಾಟ ಪ್ರಕ್ರಿಯೆ ಕುಟುಂಬ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೇ, ಅವರ ಹಕ್ಕುಗಳನ್ನು ಕಡೆಗಣಿಸಿ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Related posts