ಯಲಹಂಕ ಸಂತೆ ಮಾರ್ಕೆಟ್‌ನಲ್ಲಿ ಮೊಬೈಲ್ ಕಳವು
ಬೆಂಗಳೂರು, ಆ.30 –2025
ಯಲಹಂಕ ಸಂತೆ ಮಾರ್ಕೆಟ್‌ನಲ್ಲಿ ಖರೀದಿಗೆ ಬಂದಿದ್ದ ವ್ಯಕ್ತಿಯ ಮೊಬೈಲ್ ಫೋನ್ ಕಳುವಾದ ಪ್ರಕರಣ ವರದಿಯಾಗಿದೆ.
ನರೇಂದ್ರ ವಿ ಅವರ ಪ್ರಕಾರ, ಅವರು 27 ಆಗಸ್ಟ್ 2025ರಂದು ಬೆಳಿಗ್ಗೆ 10.15 ಗಂಟೆಗೆ ದಿನಸಿ ವಸ್ತುಗಳನ್ನು ಖರೀದಿಸಲು ಸಂತೆ ಮಾರ್ಕೆಟ್‌ಗೆ ತೆರಳಿದ ವೇಳೆ, ತಮ್ಮ OnePlus 13 (Midnight Ocean Colour) ಮೊಬೈಲ್ ಫೋನ್ (IMEI: 869556070434734, ಫೋನ್ ನಂ: 9632173694) ಕಳುವಾಗಿದೆ.
ಈ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಕಳವಾದ ಮೊಬೈಲ್ ವಶಪಡಿಸಿಕೊಳ್ಳಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪೊಲೀಸರು ಸಾರ್ವಜನಿಕರಿಗೆ – ಹಬ್ಬದ ಕಾಲದಲ್ಲಿ ಮತ್ತು ಜನಸಂದಣಿ ಪ್ರದೇಶಗಳಲ್ಲಿ ತಮ್ಮ ಮೊಬೈಲ್, ಚೀಲ ಹಾಗೂ ಬೆಲೆಬಾಳುವ ವಸ್ತುಗಳನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

