20 ವರ್ಷದ ಯುವಕ ಕಾಣೆಯಾಗಿದ್ದಾನೆ – ಪೋಷಕರಲ್ಲಿ ಆತಂಕ
ಬೆಂಗಳೂರು,
ನಗರದ ವಿಕಾಸ್ ಎನ್.ಜಿ (20) ಎಂಬ ಯುವಕ ಕಳೆದ ಸೆಪ್ಟೆಂಬರ್ 2ರ ರಾತ್ರಿ ಮನೆಯಿಂದ ಹೊರಟ ಬಳಿಕ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರು ತಿಳಿಸಿದಂತೆ, ವಿಕಾಸ್ ರಾತ್ರಿ 8 ಗಂಟೆಯ ಸುಮಾರಿಗೆ ಮನೆಯಿಂದ ಪಲ್ಸರ್ ಬೈಕ್ (ನಂಬರ: KA-41-EW-9470) ತೆಗೆದುಕೊಂಡು ಹೋದನು. ಆದರೆ ನಂತರ ಮನೆಗೆ ವಾಪಸಾಗದೆ ಕಾಣೆಯಾಗಿದ್ದಾನೆ.
ಕುಟುಂಬಸ್ಥರು ಮತ್ತು ಬಂಧುಗಳು ಆತುರದಿಂದ ತಮ್ಮ ಮಟ್ಟಿಗೆ ಎಲ್ಲೆಡೆ ಹುಡುಕಾಟ ನಡೆಸಿದರೂ, ವಿಕಾಸ್‌ನ ಸುಳಿವು ಸಿಕ್ಕಿಲ್ಲ. ಹೀಗಾಗಿ ಪೋಷಕರಾದ ಗಿರೀಶ್ (48) ಅವರು ಈ ಕುರಿತು ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದು– ವಿಕಾಸ್ ಎನ್.ಜಿ ಕುರಿತಾಗಿ ಯಾರಿಗಾದರೂ ಮಾಹಿತಿ ದೊರೆತಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

