ಶಿಗ್ಗಾಂವ ತಾಲೂಕು ತಡಸ್ ರಸ್ತೆ ಬಳಿ ಕಾರ್ ಬ್ಯಾರಿಕೇಡ್ ಗೆ ಡಿಕ್ಕಿ ಬಿಕರ ಗಾಯ:
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹುಬ್ಬಳ್ಳಿ ಸಮೀಪದ ತಡಸ್ ರಸ್ತೆ ಬಳಿ ಬಿಕರ ಕಾರು ಅಪಘಾತ ಘಟನೆ ನಡೆದಿದೆ
ದಿನಾಂಕ:06/09/2025 ರಂದು ಮುಂಜಾನೆ 04-30 ಗಂಟೆಯಿಂದ 04-45 ಗಂಟೆಯ ನಡುವಿನ ಅವಧಿಯಲ್ಲಿ ಮುತ್ತಳ್ಳಿ ಗ್ರಾಮದ ಲೇ ಬೈ ಹತ್ತಿರ ಶಿಗ್ಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋದ ಎನ್ ಹೆಚ್-48 ರಸ್ತೆಯಲ್ಲಿ ಕೆಎ-22/ಪಿ-7687 ನೇದ್ದರ ಚಾಲಕನಾದ ವೇದಾಂತ ಅಮೃತರಾವ ಜನ್ಮಣ್ಣವರ ಈತನು ತಾನು ಚಲಾಯಿಸುತ್ತಿದ್ದ ಕಾರನ್ನು ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಾರಿನ ವೇಗವನ್ನು ನಿಯಂತ್ರಿಸದೇ ರಸ್ತೆಯ ಮಧ್ಯದಲ್ಲಿರುವ ಡಿವೈಡರ್ ಬ್ಯಾರಿಕೇಡ್ ಗೆ ಡಿಕ್ಕಿ ಪಡಿಸಿ ಇದರಲ್ಲಿಯ ಗಾಯಾಳುವಿಗೆ ತೀವ್ರ ಸ್ವರೂಪದ ಗಾಯನೋವು ಪಡಿಸಿ ಕಾರನ್ನು ಜಖಂಗೊಳಿಸಿದ್ದಲ್ಲದೇ ತಾನು ಸಹ ತೀವ್ರ ಸ್ವರೂಪದ ಗಾಯಕ್ಕೆ ತುತ್ತಾಗಿದ್ದಾನೆ ಇವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ ಈ ಮಾಹಿತಿ ತಿಳಿದ ತಡಸ್ ಪೊಲೀಸರು ತಕ್ಷಣ ಆಕ್ಸಿಡೆಂಟ್ ಆದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ತಡಸ್ ಪೊಲೀಸ ಠಾಣೆಯಲ್ಲಿ ನಿರ್ಲಕ್ಷ್ಯದಿಂದ ಕಾರು ಚಲಾಯಿಸುತ್ತಿದ್ದ ಕಾರು ಚಾಲಕನ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691
https://taluknewsmedia.com/PRAMODJANAGERI.html

