ಸುದ್ದಿ 

ಸವಣೂರಿನಲ್ಲಿ ಹೆಚ್ಚಿದ ಅಂದರ್ ಬಾಹರ್ ಜೂಜಾಟ

Taluknewsmedia.com

ಸವಣೂರಿನಲ್ಲಿ ಹೆಚ್ಚಿದ ಅಂದರ್ ಬಾಹರ್ ಜೂಜಾಟ:

ಹಾವೇರಿ ಜಿಲ್ಲೆ ಸವಣೂರು ತಾಲುಕು ಸಿದ್ದಾಪುರ ಗ್ರಾಮದಲ್ಲಿ ಸಾರ್ವಜನಿಕ ಜೂಜಾಟ ಕಂಡುಬಂದಿದೆ ಸಾರ್ವಜನಿಕರಿಗೆ ಕುಟುಂಬಸ್ಥರಿಗೆ ಬಿತಿ ಹೆಚ್ಚಾಗಿದೆ

ದಿನಾಂಕ: 09-09-2025 ರಂದು ಬೆಳಗಿನ ಜಾವ 07-15 ಗಂಟೆಯ ಸುಮಾರಿಗೆ ಸವಣೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಪೊಲೀಸರು ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಒಬ್ಬರು ಮಾಹಿತಿ ನೀಡಿದ್ದು ಅದರಲ್ಲಿ ಸವಣೂರ ತಾಲ್ಲೂಕ ಸಿದ್ದಾಪೂರ ಗ್ರಾಮದ ಬಸ್ಸನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸುಮಾರು 3-4 ಜನರು ಗುಂಪಾಗಿ ಕುಳಿತುಕೊಂಡು ಇಸ್ಪೀಟು ಎಲೆ ಹಚ್ಚಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಮತ್ತು ನೀವು ಬಂದು ರೇಡ ಮಾಡಿದರೆ ಸಿಗುತ್ತಾರೆ ಅಂತಾ ಮಾಹಿತಿ ಬಂದಿದ್ದು ಕಾರಣ ಪೊಲೀಸರು ಸ್ಥಳದಲ್ಲಿ ಇಸ್ಪೀಟು ಎಲೆ ಆಡುತ್ತಿದ್ದವರ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ ಸದರಿ ವ್ಯಕ್ತಿಗಳ ಮೇಲೆ ಸರಕಾರಿ ತರಪಿಯಾಗಿ ಸವಣೂರು ಪೊಲೀಸರೇ
ದೂರನ್ನು ಸ್ವೀಕರಿಸಿಕೊಂಡು ಸವಣೂರ ಠಾಣಾ ಅಸಂಜ್ಞೆಯ ಅಪರಾಧ ಸಂಖ್ಯೆ: 40/2025 ಕಲಂ: 87 ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ದೂರು ದಾಖಲಿಸಿಕೊಂಡು ನಂತರ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691
https://taluknewsmedia.com/PRAMODJANAGERI.html

Related posts