ಸುದ್ದಿ 

ಹಣವಿಲ್ಲದಿದ್ದರೂ ಹಸಿದವರಿಗೆ ಹೊಟ್ಟೆತುಂಬ ಊಟ ನೀಡುವ ‘ಫುಡ್ ಬ್ಯಾಂಕ್ ಯೋಜನೆ..

Taluknewsmedia.com

ಹಣವಿಲ್ಲದಿದ್ದರೂ ಹಸಿದವರಿಗೆ ಹೊಟ್ಟೆತುಂಬ ಊಟ ನೀಡುವ ‘ಫುಡ್ ಬ್ಯಾಂಕ್ ಯೋಜನೆ.. ರಾಜ್ಯದ 236 ತಾಲೂಕುಗಳಲ್ಲಿ ಕಾರ್ಯಾರಂಭ ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲದವರು ಹಸಿವಿನಿಂದ ಇರಬಾರದೆಂದು ‘ಫುಡ್ ಬ್ಯಾಂಕ್ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆ.

ಹಸಿದವರಿಗೆ ಊಟ ನೀಡುವ ಫುಡ್ ಬ್ಯಾಂಕ್ ಕೈಯಲ್ಲಿ ಹಣವಿಲ್ಲದಿದ್ದರೂ ಹಸಿದವರಿಗೆ ಹೋಟೆಲ್​ನಲ್ಲಿ ಊಟ ನೀಡುವ ಯೋಜನೆಯೊಂದು ಸದ್ದಿಲ್ಲದೆ ಕಾರ್ಯಾರಂಭ ಮಾಡಿದೆ. ರಾಜ್ಯದ 236 ತಾಲೂಕುಗಳಲ್ಲಿ ಫುಡ್ ಬ್ಯಾಂಕ್ ಪ್ರಾರಂಭ ಆಗುತ್ತಿದೆ.

ಹೌದು, ಒಪ್ಪೊತ್ತಿನ ಊಟಕ್ಕೆ ಗತಿಯಿಲ್ಲದವರು ಹಸಿವಿನಿಂದ ಇರಬಾರದೆಂದು ‘ಫುಡ್ ಬ್ಯಾಂಕ್ ಎಂಬ ಯೋಜನೆಯನ್ನು ಆರಂಭಿಸಲಾಗಿದೆ. ಬಡವರ ಹಸಿವು ತಣಿಸುವ ಕಾರ್ಯವನ್ನು ಮಾರಾಂಡಹಳ್ಳಿ ಗ್ರಾಮದಲ್ಲಿ ಜನಿಸಿದ ಎಂ. ಬಿ ಕೃಷ್ಣಮೂರ್ತಿ ಕರ್ನಾಟಕ ಫುಡ್ ಬ್ಯಾಂಕ್ ಆರಂಭಿಸಿದೆ. ಬಡವರ ಹಸಿವು ತಣಿಸಲೆಂದು ‘ಫುಡ್ ಬ್ಯಾಂಕ್’ ವ್ಯವಸ್ಥೆ ಇರುವ ಹೋಟೆಲ್ ಹೊರಗಡೆ ಅಳವಡಿಸಿರುವ ಟೋಕನ್ ತೆಗೆದುಕೊಂಡು ಕೌಂಟರ್​ನಲ್ಲಿ ನೀಡಿ ಯಾವುದೇ ಅಂಜಿಕೆಯಿಲ್ಲದೆ ಹೊಟ್ಟೆ ತುಂಬಾ ಊಟ ಮಾಡಬಹುದಾಗಿದೆ.

ಸಹೃದಯಿಗಳು ನೀಡಬಹುದು ನೆರವು.. ತಿಂಗಳಿಗೊಮ್ಮೆ ಹೋಟೆಲ್​ನವರಿಗೆ ಪೇಮೆಂಟ್ ಮಾಡಲಾಗುತ್ತದೆ‌. ಆ್ಯಪ್​ನಲ್ಲಿ ದಾನಿಗಳಿಗೂ ಹಣ ಸಹಾಯ ಮಾಡುವ ವ್ಯವಸ್ಥೆಯೂ ಇದೆ. ಕಳೆದ ಎರಡು ವರ್ಷದ ಅವಧಿಯಲ್ಲಿ ‘ಫುಡ್ ಬ್ಯಾಂಕ್ ನಿಂದ 12,500 ಕ್ಕೂ ಅಧಿಕ ಮಂದಿಯ ಹಸಿವು ತಣಿಸುವ ಕಾರ್ಯವಾಗಿದೆ.

ಕರ್ನಾಟಕ ಫುಡ್ ಬ್ಯಾಂಕ್ ಅಧ್ಯಕ್ಷ ಮಾರಾಂಡಹಳ್ಳಿ ಎಂ. ಬಿ. ಕೃಷ್ಣಮೂರ್ತಿ ಮಾತನಾಡಿ, “ನಮ್ಮ ಸಂಸ್ಥೆ ಅನೇಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಅದರ ಮುಂದುವರಿದ ಭಾಗವಾಗಿ ಫುಡ್ ಬ್ಯಾಂಕ್ ಯೋಜನೆ ಆರಂಭಿಸಲಾಗಿದೆ. ಇದೊಂದು ವಿಶೇಷ ಯೋಜನೆಯಾಗಿದ್ದು, ಹೊರಗಿನಿಂದ ನಗರಕ್ಕೆ ಬಂದ ಯಾರಿಗಾದರೂ ಕೈಯಲ್ಲಿ ದುಡ್ಡಿಲ್ಲದಿದ್ದರೆ ಅವರಿಗೆ ಊಟ ನೀಡಲಾಗುವುದು. ಎರಡು ವರ್ಷದಿಂದ 12,500ಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಯೋಜನೆಯಲ್ಲಿ ದಾನಿಗಳು ಸಹ ಸಹಾಯ ಮಾಡುವ ವ್ಯವಸ್ಥೆ ಇದೆ. ಇದು ತುಂಬಾ ಯಶಸ್ವಿಯಾಗಿದೆ. ಬಡವರು, ಕೈಯಲ್ಲಿ ಕಾಸಿಲ್ಲದ ಮಂದಿ ಒಂದು ಹೊತ್ತಿನ ಊಟವನ್ನು ಯಾವುದೇ ಮುಜುಗರವಿಲ್ಲದೆ ಇಲ್ಲಿ ಉಚಿತವಾಗಿ ಉಣ್ಣಬಹುದಾಗಿದೆ ಎಂದಿದ್ದಾರೆ.

Related posts