ಸುದ್ದಿ 

ಮಲಗುಂದ,ಹೊಲದಲ್ಲಿ ಅಕ್ರಮ ನಿಧಿ ಹುಡುಕಾಟ ಎಪ್ ಐ ಆರ್ ದಾಖಲು

Taluknewsmedia.com

ಮಲಗುಂದ,ಹೊಲದಲ್ಲಿ ಅಕ್ರಮ ನಿಧಿ ಹುಡುಕಾಟ ಎಪ್ ಐ ಆರ್ ದಾಖಲು

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡುರೂ ಸಮೀಪದ ಮಲಗುಂದ ಗ್ರಾಮದಲ್ಲಿ ಹೊಲದಲ್ಲಿ ಅಕ್ರಮ ನಿಧಿ ಹುಡುಕುತ್ತಿರುವ ಘಟನೆ ಬೆಳಕಿಗೆ ಬಂದಿದೆ

ಇದರಲ್ಲಿನ ಆರೋಪಿತರಾದ ರೇಣುಕಸ್ವಾಮಿ ,ಮೌಲಾಲಿ,ಆನಂದ ಊರಣಕರ್,ಪ್ರವೀಣ ಸಾಲಿಮಠ,ಮಹಾಂತೇಶ್ ಬೆಲ್ಲದ ಇವರು ಮೂಲತಃ ಸ್ಥಳೀಯರೇ ಆಗಿದ್ದು ತಮ್ಮ ಅಕ್ರಮ ಲಾಭಕ್ಕಾಗಿ ದಿನಾಂಕ: 29-03-2025 ರಂದು ಬೆಳಗಿನಜಾವ 4-30 ಘಂಟೆಯ ಸುಮಾರಿಗೆ ಆಡೂರ ಪೊಲೀಸ್ ಠಾಣೆ ವ್ಯಾಪ್ತಿಯ ಮಲಗುಂದ ಗ್ರಾಮದ ಮಲಗುಂದ ಗ್ರಾಮದಿಂದ ಕೂಸನೂರ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಇರುವ ವಾಮನರಾವ್ ಕೃಷ್ಣರಾವ್ ದೇಸಾಯಿ ಇವರ ಸರ್ವೇ ನಂ: 119 ನೇದ್ದರ ಜಮೀನಿನ ಬದುವಿನಲ್ಲಿ ಇರುವ ಗಿಡಗಂಟಿಗಳ ನಡುವೆ ಇದ್ದ ಕೋಣಕಲು ಭರಮಪ್ಪ ದೇವರ ಶಿಲಾಮೂರ್ತಿಯನ್ನು ಪಕ್ಕಕ್ಕೆ ಸರಿಸಿ ಇಟ್ಟು ಅದರ ಕೆಳಗಡೆಯ ನೆಲವನ್ನು ಗುದ್ದಲಿ, ಸಲಿಕೆಗಳಿಂದ ಅಗೆದು ನಿಧಿಯನ್ನು ಹುಡುಕಾಟ ಮಾಡಿರುವ ಬಗ್ಗೆ ಆರೋಪ. ಇದನ್ನು ಖುದ್ದಾಗಿ ನೋಡಿದ್ದ ಹೊಲದ ಮಾಲಿಕರಾದ ಚಿದಾನಂದಯ್ಯ ಹಿರೇಮಠ್ ಅವರು ಊರಿನವರೊಂದಿಗೆ ಚರ್ಚಿಸಿ ಆರೋಪಿತರ ಮೇಲೆ ದಿನಾಂಕ 06/೦9/2025ರಂದು ತಡವಾಗಿ ಆಡುರೂ ಪೊಲೀಸ ಠಾಣೆಗೆ ಆರೋಪಿತರ ಮೇಲೆ ದೂರು ನೀಡಿರುತ್ತಾರೆ ಇದನ್ನು ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ

: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691
https://taluknewsmedia.com/PRAMODJANAGERI.html

Related posts