ಸುದ್ದಿ 

ಸವಣೂರೂ-ಯಲವಗಿ ಮಾರ್ಗ ಮಧ್ಯ ಬೈಕ್ ಕಾರ್ ಆಕ್ಸಿಡೆಂಟ್

Taluknewsmedia.com

ಸವಣೂರೂ-ಯಲವಗಿ ಮಾರ್ಗ ಮಧ್ಯ ಬೈಕ್ ಕಾರ್ ಆಕ್ಸಿಡೆಂಟ್

ಹಾವೇರಿ ಜಿಲ್ಲೆ ಸವಣೂರು ತಾಲುಕು ಯಲವಿಗಿ ಬೈಕ್ ಕಾರ್ ಗೆ ಆಕ್ಸಿಡೆಂಟ್ ಘಟನೆ ಸಂಭವಿಸಿದೆ

ದಿನಾಂಕ: 10-09-2025 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಯಲವಿಗಿ ಗ್ರಾಮದ ಪೆಟ್ರೋಲ ಬಂಕ ಕಡೆಯಿಂದ ಯಲವಿಗಿಯಿಂದ ಸವಣೂರ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಯಲವಾಗಿ ಗ್ರಾಮದ ಕಾರ್ತಿಕ್ ಪರಮೇಶಪ್ಪ ಹುಲಗೂರ ಇತನು ತನ್ನ ಬೈಕ್ ನಂಬರ ಕೆಎ-27/ಇಎಮ್-6324 ನೇದ್ದನ್ನು ಪೆಟ್ರೋಲ ಬಂಕ ಕಡೆಯಿಂದ ಅತೀ ಜೋರಾಗಿ, ನಿರ್ಲಕ್ಷ್ಯ, ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಮುಖ್ಯ ರಸ್ತೆಯಲ್ಲಿ ವಾಹನಗಳು ಬರುವದನ್ನು ಗಮನಿಸದೇ ಯಲವಿಗಿಯಿಂದ ಸವಣೂರ ಕಡೆಗೆ ಹೋಗುತ್ತಿದ್ದ ಕಾರ ನಂಬರ ಕೆಎ-04/ಎಮ್.ಯು-7365 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ, ತಾನು ಗಾಯ, ನೋವು ಹೊಂದಿದ್ದಲ್ಲದೇ ಕಾರಿನಲ್ಲಿದ್ದ, ವ್ಯಕ್ತಿಗಳಾದ ಸಿದ್ದರಾಮಪ್ಪ ಈಶ್ವರಪ್ಪ ಸಂಶಿ, ಮೆಹಬೂಬ ಬಾಬುಸಾಬ ಸಿದ್ಧಿ, ರಾಜೇಸಾಬ ಸಾಬೀರ ಖಾದರಸಾಬ ವಾಲೀಕಾರ ಇವರಿಗೂ ತೀವ್ರ ಸ್ವರೂಪದ ಗಾಯ ನೋವಿಪಡಿಸಿದ್ದಾನೆ ಅಪಘಾತಪಡಿಸಿದ ಮೋಟರ್ ಸೈಕಲ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕಾರ್ ಓನರ್ ಆದ ನೌಶಾದ್ ಮೌನುದ್ದಿನ ಆಡೂರ್ ಇವರು ಸವಣೂರು ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691
https://taluknewsmedia.com/PRAMODJANAGERI.html

Related posts