ಸುದ್ದಿ 

ಸವಣೂರು-ಲಕ್ಷ್ಮೇಶ್ವರ ರಸ್ತೆ ಲಾರಿ ಡಿಕ್ಕಿ ವ್ಯಕ್ತಿ ಸ್ಥಳದಲ್ಲೇ ದುರ್ಮರಣ

Taluknewsmedia.com

ಸವಣೂರು-ಲಕ್ಷ್ಮೇಶ್ವರ ರಸ್ತೆ ಲಾರಿ ಡಿಕ್ಕಿ ವ್ಯಕ್ತಿ ಸ್ಥಳದಲ್ಲೇ ದುರ್ಮರಣ

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮುಖ್ಯರಸ್ತೆ ಮುಂಜಾನೆ ವಾಕಿಂಗ್ ಹೋಗುತ್ತಿರುವ ವ್ಯಕ್ತಿ ಮೇಲೆ ಲಾರಿ ಹಾಯಿಸಿದ ಕೊಲೆ ಆರೋಪ

ದಿನಾಂಕಃ 14-09-2025 ರಂದು ಮುಂಜಾನೆ 5-30 ಗಂಟೆಯ ಸುಮಾರಿಗೆ ಇದರಲ್ಲಿ ಪೊಲೀಸ್ ಎಫ್ಐಆರ್ ದಾಖಲು ಮಾಡಿದ ವ್ಯಕ್ತಿಯಾದ ಫಕ್ಕೀರಪ್ಪ ಬಸವರಾಜ ಕೆಮ್ಮಣಕೇರಿ ಮತ್ತು ಅವರ ಸಹೋದರರಾದ ರಾಜೇಶ ಬಸಪ್ಪ ಕೆಮ್ಮಣಕೇರಿ ಇಬ್ಬರು ಸೇರಿ ಪ್ರತಿ ದಿನದಂತೆ ಸವಣೂರ-ಲಕ್ಷ್ಮೀಶ್ವರ ಮುಖ್ಯರಸ್ತೆಯ ಸವಣೂರ ಬಸ್ ನಿಲ್ದಾಣದ ಮುಂದೆ ವಾಕಿಂಗ್ ಹೊರಟಿದ್ದಾಗ ಲಕ್ಷ್ಮೀಶ್ವರ ಕಡೆಯಿಂದ ಒಂದು ಟಿಪ್ಪರ ಲಾರಿ ನಂಬರ ಕೆಎ-26 ಬಿ-4628 ನೇದ್ದನ್ನು ಜೋರಾಗಿ ಮತ್ತು ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಜೇಶ ಇವರಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಲಾರಿಯನ್ನು ಅವರ ಮೇಲೆ ಹತ್ತಿಸಿ ಅವರು ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿ ಲಾರಿ ಬಿಟ್ಟು ಓಡಿ ಹೋಗಿರುತ್ತಾನೆ ಇದನ್ನು ಪ್ರತ್ಯಕ್ಷವಾಗಿ ನೋಡಿದ್ದ ಅವನ ಸಹೋದರನು ಆಗಿದ್ದ ಫಕ್ಕೀರಪ್ಪ ಬಸವರಾಜ ಕೆಮ್ಮಣಕೇರಿ ಇವರು ತಕ್ಷಣ ಸವಣೂರು ಪೊಲೀಸರಿಗೆ ಮಾಹಿತಿ ತಿಳಿಸಿ ಟಿಪ್ಪರ್ ಡ್ರೈವರ್ ಮತ್ತು ಮಾಲೀಕರ ಮೇಲೆ ಸವಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ನಡೆದ ಘಟನೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.

: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691
https://taluknewsmedia.com/PRAMODJANAGERI.html

Related posts