ಶಿಗ್ಗಾಂವ ನಗರ ಈಗ ಅಂದರ್ ಬಾಹರ್ ಜೂಜಾಟದ ಹಬ್
ಶಿಗ್ಗಾಂವ ನಗರ ಈಗ ಅಂದರ್ ಬಾಹರ್ ಜೂಜಾಟದ ಹಬ್ಹ
ಹಾವರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನಲ್ಲಿ ಇತ್ತೀಚಿಗೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿವೆ ಅಂದರ್ ಬಾಹರ್ ಜೂಜಾಟ ಪ್ರಕರಣಗಳು ಹೆಚ್ಚಿವೆ ಇದರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸಾರ್ವಜನಿಕರ ಒತ್ತಾಯ
ದಿನಾಂಕಃ 13/09/2025 ರಂದು ಸಂಜೆ: 05-00 ಗಂಟೆಗೆ ಶಿಗ್ಗಾವಿ ಪೊಲೀಸ ಠಾಣೆ ಹದ್ದಿನಲ್ಲಿ ಬರುವ ಮೈಲಾರಲಿಂಗೇಶ್ವರ ದೇವಸ್ಥಾನದ ಹಿಂದೆ ಸಾರ್ವಜನಿಕ ಸ್ಥಳದಲ್ಲೇ ಕೆಲವು ಜನರು ಸೇರಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟು,ಅಂದರ-ಬಾಹರ ಜೂಜಾಟವನ್ನು ಆಡುತ್ತಿರುವ ಬಗ್ಗೆ ಅಲ್ಲಿನ (ಲೋಕಲಿಟ್ಸ್) ಸಾರ್ವಜನಿಕರು ಸ್ವತಃ ಶಿಗ್ಗಾಂವಿ ನಗರ ಪೊಲೀಸ್ ಠಾಣೆಗೆ ಅಂದರ ಬಾಹರ್ ಚಟುವಟಿಕೆಯ ವಿರುದ್ಧ ಆದಷ್ಟು ಬೇಗೆ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಜನರು ಇದರಿಂದ ಆರ್ಥಿಕವಾಗಿ,ಸಾಮಾಜಿಕವಾಗಿ ಜೀವನವನ್ನು ನಷ್ಟಕ್ಕೆ ತಳ್ಳುತ್ತಿರುವುದು ದುರ್ವಿಧಿ! ಇದನ್ನು ಪೊಲೀಸರು ಖಂಡಿಸಿ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರ ಒತ್ತಾಯದ ಮೇಲೆಗೆ ಪೊಲೀಸರು ಜೂಜಾಟ ಪ್ರಕ್ರಿಯೆಯಲ್ಲಿರುವವರ ಮೇಲೆ ದೂರು ದಾಖಲಿಸಿಕೊಂಡು ಸಾರ್ವಜನಿಕವಾಗಿ ಇಂತ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ನಮ್ಮ ಕರ್ತವ್ಯ ಎಂದು ಜನರಲ್ಲಿ ಭರವಸೆ ಮೂಡಿಸಿದ್ದಾರೆ..:
ವರದಿ ಪ್ರಮೋದ್ ಜನಗೇರಿಹಾನಗಲ್ ತಾಲೂಕ್ ಆಲದಕಟ್ಟಿತಾಲೂಕ್ ನ್ಯೂಸ್ .ಹಾವೇರಿ6360821691https://taluknewsmedia.com/PRAMODJANAGERI.html

