ಹೆಂಡತಿ ಮೇಲೆ ಸಂಶಯ ಕಿರುಕುಳ,ದೈಹಿಕ ಹಲ್ಲೆ ಯತ್ನ ಹೆಂಡತಿಯಿಂದ ದೂರು ದಾಖಲು
ಹೆಂಡತಿ ಮೇಲೆ ಸಂಶಯ ಕಿರುಕುಳ,ದೈಹಿಕ ಹಲ್ಲೆ ಯತ್ನ ಹೆಂಡತಿಯಿಂದ ದೂರು ದಾಖಲು
ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಹೆಂಡತಿಯ ಮೇಲೆ ಸಂಶಯ ಪಟ್ಟು ಮಾನಸಿಕ,ದೈಹಿಕ ಹಿಂಸೆ ನೀಡಿ ಕಿರುಕುಳ ನೀಡಿದ್ದು ನೊಂದ ಮಹಿಳೆ ಗಂಡನ ವಿರುದ್ಧ ಮಾಡಿದ ಆರೋಪ
ಬಂಕಾಪುರ ಪಟ್ಟಣದ ನಿವಾಸಿಗಳಾಗಿರುವ ಪ್ರಕಾಶ ಬಸವಣ್ಣೆಪ್ಪ ನವಲಗುಂದ ಹಾಗು ಚೇತನಾ ನವಲಗುಂದ ಇಬ್ಬರಿಗೂ ಗುರುಹಿರಿಯರ ಸಮ್ಮುಖದಲ್ಲಿ ದಿನಾಂಕ 07-02-2025 ರಂದು ಅರೇಂಜ್ ಮದುವೆ ಆಗಿರುತ್ತದೆ. ಮದುವೆಯಾದ ನಂತರ ಆರೋಪಿತನಾದ ಪ್ರಕಾಶ ನವಲಗುಂದ ಹೆಂಡತಿಯನ್ನು ಒಂದೆರೆಡು ತಿಂಗಳ ಚನ್ನಾಗಿ ನೋಡಿಕೊಂಡಿದ್ದು ನಂತರದ ದಿನಗಳಲ್ಲಿ ನಿನಗೆ ಕೆಲಸ ಮಾಡಲು ಬರೋದಿಲ್ಲ ಹಾಗೇ ಹೀಗೆ ಅಂತಾ ವಿನಾಕಾರಣ ಬೈದಾಡುತ್ತಾ ಕೈಯಿಂದ ಹೊಡಿ ಬಡಿ ಮಾಡಿ ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುತ್ತಾ ಬಂದಿದ್ದು ಅಲ್ಲದೆ ದಿನಾಂಕ 13-04-2025 ರಂದು ರಾತ್ರಿ ಬೆಳಗಿನ 1-00 ಗಂಟೆಯ ಸುಮಾರಿಗೆ ತನ್ನ ಹೆಂಡತಿಗೆ ಅಸಹ್ಯಕರವಾದ ರೀತಿಯಲ್ಲಿ ಸಂಭೋಗ ಮಾಡುವಂತೆ ಕೇಳಿದ್ದು ಅದಕ್ಕೆ ಅವಳು ಒಪ್ಪದೆ ಇದ್ದಾಗ ಅವಳಿಗೆ ದೈಹಿಕ ಹಾಗೂ ಮಾನಸಿಕ ಹಲ್ಲೆ ಮಾಡಿರುತ್ತಾನೆ. ನಂತರ ಹೆಂಡತಿ ಪಂಚಮಿ ಹಬ್ಬಕ್ಕೆ ತನ್ನ ತವರು ಮನೆಗೆ ಹೋಗಿದ್ದು ದಿನಾಂಕ 26-08-2025 ರಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ತನ್ನ ಗಂಡ ತನಗೆ ಕೊಡುತ್ತಿದ್ದ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೆನಪಿಸಿಕೊಂಡು ತನ್ನ ತವರು ಮನೆಯಲ್ಲಿ ಟೈಲ್ಸ್ ಕಲ್ಲು ಒರಸಲು ತಂದಿದ್ದ ಪೀನಾಯಿಲ್ ಕುಡಿದು ಮೂರ್ಚೇತಪ್ಪಿದಾಗ ಸಂಬಂಧಿಕರು ಬಂಕಾಪುರ ಸರಕಾರಿ ಆಸ್ಪತ್ರೆಗೆ ದಾಖಲ ಮಾಡಿದ್ದು ಅಲ್ಲಿಂದ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಉಪಚಾರ ಪಡೆದುಕೊಂಡು ಬಂದು ತನಗೆ ಮಾನಸಿಕ ಹಾಗು ದೈಹಿಕ ಹಿಂಸೆ ಕೊಟ್ಟು ತನ್ನ ಮೇಲೆ ಸಂಶಯ ಪಡುತ್ತಿದ್ದ ತನ್ನ ಗಂಡನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಂಕಾಪುರ ನಗರ ಪೊಲೀಸರಿಗೆ ಸಂಪೂರ್ಣ ಮಾಹಿತಿ ತಿಳಿಸಿ ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ
ಪೊಲೀಸರು ಈ ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ..
: ವರದಿ
ಪ್ರಮೋದ್ ಜನಗೇರಿ
ಹಾನಗಲ್ ತಾಲೂಕ್ ಆಲದಕಟ್ಟಿ
ತಾಲೂಕ್ ನ್ಯೂಸ್ .ಹಾವೇರಿ
6360821691
https://taluknewsmedia.com/PRAMODJANAGERI.html

