ಟಿಕೆಟ್ ಬುಕ್ ಮಾಡಿದ ನಂತರ ಪ್ರಯಾಣ ದಿನ ಬದಲಾವಣೆಗೆ ಅವಕಾಶವನ್ನು ನೀಡಲು ರೈಲ್ವೆ ಇಲಾಖೆ, ಚಿಂತನೆ.
ಟಿಕೆಟ್ ಬುಕ್ ಮಾಡಿದ ನಂತರ ಪ್ರಯಾಣ ದಿನ ಬದಲಾವಣೆಗೆ ಅವಕಾಶವನ್ನು ನೀಡಲು ರೈಲ್ವೆ ಇಲಾಖೆ, ಚಿಂತನೆ.
ರಾಜ್ಯದಲ್ಲಿ ಹೆಚ್ಚು ಜನರು ಉಪಯೋಗಿಸುವ ವಾಹನಗಳಲ್ಲಿ ರೈಲ್ವೆಯು ಕೂಡ ಒಂದಾಗಿದ್ದು ಹಾಗೆಯೇ ಇದು ಉತ್ತಮವಾದ ಶುಲ್ಕವನ್ನು ಕೂಡ ಹೊಂದಿದೆ. ಮಧ್ಯಮ ವರ್ಗದವರಿಗೆ ಬಡವರಿಗೆ ಹಾಗೂ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ಇದು ಉತ್ತಮವಾದ ವಾಹನವಾಗಿದೆ. ರೈಲ್ವೆ ಇಲಾಖೆಯಲ್ಲಿನ ಸಮಸ್ಯೆ ಎಂದರೆ ಒಮ್ಮೆ ಟಿಕೆಟ್ ಬುಕ್ಕಾದ ತಕ್ಷಣ ಆ ದಿನ ಪ್ರಯಾಣ ಮಾಡಲಿಲ್ಲವೆಂದರೆ ಅದು ಕ್ಯಾನ್ಸಲ್ ಆಗುವ ಸಂಭವ ಇತ್ತು ಹಾಗೆ ಯಾವುದೇ ಶುಲ್ಕವು ಮರಳಿ ಬರುವುದಿಲ್ಲ. ಟಿಕೆಟ್ ಬುಕ್ ಮಾಡಿದ ನಂತರ ಪ್ರಯಾಣಿಕರು ತಮ್ಮ ಪ್ರಯಾಣದ ದಿನವನ್ನು ಬದಲಿಸಲು ಅವಕಾಶವಿರಲಿಲ್ಲ ಹಾಗೆ ಆ ಟಿಕೆಟ್ ಅನ್ನ ರದ್ದುಗೊಳಿಸಿ ಬೇರೆ ಟಿಕೆಟ್ ಬುಕಿಂಗ್ ಮಾಡುವ ವ್ಯವಸ್ಥೆ ಇತ್ತು. ಇಲಾಖೆ ಈ ಮನವಿಯನ್ನು ಪರಿಶೀಲಿಸುತ್ತಿದೆ. ಟಿಕೆಟ್ ಬುಕ್ ಮಾಡಿದ ನಂತರ ಪ್ರಯಾಣಿಕರು ತಮ್ಮ ದಿನವನ್ನು ಬದಲಿಸುವ ಅವಕಾಶವನ್ನು ನೀಡುವ ಕುರಿತು ರೈಲ್ವೆ ಇಲಾಖೆ ಈ ವಿಷಯದ ಕುರಿತು ಗಂಭೀರವಾಗಿ ಕ್ರಮವನ್ನು ತೆಗೆದುಕೊಳ್ಳುತ್ತದೆ ಹಾಗೆಯೇ ಜನವರಿಯಿಂದ ಇದು ಜಾರಿಗೆ ಕೂಡ ಬರುತ್ತದೆ.

