ಸುದ್ದಿ 

ಅಂತ್ಯಸಂಸ್ಕಾರ ಪರಿಹಾರ ಯೋಜನೆ ಮೃತರ ಕುಟುಂಬಕ್ಕೆ ಸಿಗಲಿದೆ ಒಂದು ಲಕ್ಷ 50,000 ಪರಿಹಾರ..

Taluknewsmedia.com

ಅಂತ್ಯಸಂಸ್ಕಾರ ಪರಿಹಾರ ಯೋಜನೆ ಮೃತರ ಕುಟುಂಬಕ್ಕೆ ಸಿಗಲಿದೆ ಒಂದು ಲಕ್ಷ 50,000 ಪರಿಹಾರ..

ಯಾವುದು ಈ ಯೋಜನೆ ಅಂತೀರಾ ಅದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೊಂದಾಯಿತ ವಿಭಾಗ. ಈ ಇಲಾಖೆಯು ತನ್ನ ಅಡಿಯಲ್ಲಿ ಬರತಕ್ಕಂತಹ ಎಲ್ಲಾ ಉದ್ಯೋಗಸ್ಥರಿಗೆ ಗುಡ್ ನ್ಯೂಸ್ ಅನ್ನು ಕೊಟ್ಟಿದೆ ಅಂತ ಹೇಳಬಹುದು. ಇದು ಕಟ್ಟಡ ಕಾರ್ಮಿಕರಿಗೆ ಅಚಾನಕ್ಕಾಗಿ ಅವರು ಮೃತಪಟ್ಟರೆ . ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ನೀಡುವ ಒಂದು ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಲಿಕ್ಕೆ ಈ ಇಲಾಖೆ ಸಜ್ಜಾಗಿದೆ. ಹಾಗೆ ಕಾರ್ಮಿಕರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಅಂತ್ಯಕ್ರಿಯೆ ವೆಚ್ಚ ಮತ್ತು ಪರಿಹಾರ ಧನವನ್ನು ನೀಡಲು ಈ ಯೋಜನೆ ನೆರವಾಗುತ್ತದೆ. ಅಂತ್ಯಕ್ರಿಯೆಯ ಪರಿಹಾರ ಧನ ನಾಲ್ಕು ಸಾವಿರ ರೂಪಾಯಿಗಳಾಗಿದ್ದು. ಹಾಗೂ ಪರಿಹಾರ ಹಣ ರೂ.1, 46,000 ಎಂಬ ಮೊತ್ತವನ್ನು ಕುಟುಂಬಕ್ಕೆ ಇಲಾಖೆ ನೀಡಲು ಮುಂದಾಗಿದೆ ಹಾಗೆ ಇದು ಯಾವ ಒಂದು ವರ್ಷದಲ್ಲಿ ಆಗಿರುವಂತದ್ದು ಅಂದ್ರೆ ಜುಲೈ 16 . 2025 ಇದರ ನಂತರ ಯಾರು ಮೃತಪಟ್ಟಿದ್ದಾರೋ ಈ ಹಣ ಅಥವಾ ಈ ಯೋಜನೆ. ಲಭ್ಯವಾಗಲಿದೆ ಹಾಗೆಯೇ ಕಡ್ಡಾಯವಾಗಿ ಕಾರ್ಮಿಕರ ಇಲಾಖೆಯಲ್ಲಿ ಇವರು ಕಾರ್ಮಿಕ ನೋಂದಣಿಯ ಅಡಿಯಲ್ಲಿ ತಮ್ಮನ್ನು ಮಾಡಿಕೊಂಡಿರಬೇಕು. ಹಲವಾರು ನಿಯಮಗಳಿಗೂ ಕೂಡ ಈ ಯೋಜನೆ ಒಳಪಟ್ಟಿದೆ.

Related posts