ಸುದ್ದಿ 

ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿಯ ಶವ ಪತ್ತೆ? ಅತ್ಯಾಚಾರ ಶಂಕೆ..

Taluknewsmedia.com

ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿಯ ಶವ ಪತ್ತೆ? ಅತ್ಯಾಚಾರ ಶಂಕೆ..

ಮೈಸೂರು ದಸರಾ ಎಂದ ಕ್ಷಣ ಎಲ್ಲರಿಗೂ ನೆನಪಾಗುವುದು ನಾಡ ದೇವಿಯ ಹಬ್ಬ ಹಾಗೂ ಸಾಕಷ್ಟು ಮನೋರಂಜನಾ ಒಂದು ವಸ್ತು ಪ್ರದರ್ಶನ ಹಲವಾರು ವಿವಿಧ ಬಗೆಯ ವ್ಯಾಪಾರಿಗಳು. ಇವೆಲ್ಲವೂ ದಸರಾ ಹಬ್ಬದಲ್ಲೂ ಎಲ್ಲರಿಗೂ ಜೀವನವನ್ನು ರೂಪಿಸಿಕೊಡುವ ಕಾರ್ಯವನ್ನು ದಸರಾ ಹಬ್ಬ ಒದಗಿಸುತ್ತದೆ. ಹಾಗೆಯೇ ದಸರಾ ಹಬ್ಬದ ಬಲೂನ್ ಮಾರಲು ಬಂದಿದ್ದ ಬಾಲಕಿಯ ಶವ ಪತ್ತೆಯಾಗಿದ್ದು ಎಲ್ಲರನ್ನು ಗಾಬರಿ ಹಾಗೂ ಆತಂಕವನ್ನು ಉಂಟುಮಾಡುವ ಸ್ಥಿತಿ ತಂದು ಒಡ್ಡಿದೆ. ಮೈಸೂರು ವಸ್ತು ಪ್ರದರ್ಶನ ಮೈದಾನದಲ್ಲಿ ದಸರಾ ಹಬ್ಬದಲ್ಲಿ . ಬಲೂನ್ ಮಾರಲು ತಂದೆ ತಾಯಿ ಹಾಗೂ ಊರ್ವ ಬಾಲಕಿ ಬಂದಿದ್ದರು. ದೊಡ್ಡಕೆರೆ ಮೈದಾನದ ಸುತ್ತಲಿನ ರಸ್ತೆಯಲ್ಲಿ ದಸರಾದ ವ್ಯಾಪಾರಕ್ಕಾಗಿ ಬಂದ ವ್ಯಾಪಾರಿಗಳು ನೆಲೆಸಿದ್ದರು . ಬುಧವಾರ ಚಾಮುಂಡೇಶ್ವರಿ ದೇವಾಲಯದ ತಪೋತ್ಸವವನ್ನ ಮುಗಿಸಿ ಗುರುವಾರ ಬೇರೆ ಕಡೆ ತೆರಳಲು ಸಿದ್ಧರಿದ್ದರು. ರಾತ್ರಿ ವ್ಯಾಪಾರ ಮುಗಿಸಿ ಬಂದ ಗುಲ್ಬರ್ಗಾ ಮೂಲದ ಸುಮಾರು 10 ರಿಂದ 12 ವರ್ಷದ ಬಾಲಕಿ ತಂದೆ ತಾಯಿಯೊಂದಿಗೆ ಮಲಗಿದ್ದಳು. ಮುಂಜಾನೆ ಜಿಟಿ ಜಿಟಿ ಮಳೆ ಆರಂಭವಾಗಿದ್ದು. ಎಲ್ಲರೂ ಎದ್ದಾಗ ಆ ಬಾಲಕಿ ಕಾಣೆಯಾಗಿದ್ದಾಳೆ ತದನಂತರ ಹುಡುಕಾಡಿದಾಗ ಅವರು ಹಾಕಿದ್ದ ಟೆಂಟ್ನಿಂದ 50 ಕಿಲೋಮೀಟರ್ ದೂರದಲ್ಲಿ ರಾಶಿಯ ಬಳಿ ಬಾಲಕಿಯ ಶವ ಅತ್ಯಾಚಾರವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಶ್ವಾನದಳದ ಜೊತೆ ಆಗಮಿಸಿ . ಸುತ್ತಮುತ್ತಲು ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

Related posts