ಆಕಸ್ಮಿಕವಾದ ತಾಯಿಯ ಸಾವು . ಅನಾಥವಾದ ಮಕ್ಕಳು.
ಆಕಸ್ಮಿಕವಾದ ತಾಯಿಯ ಸಾವು . ಅನಾಥವಾದ ಮಕ್ಕಳು.
ಸಮಾಜದಲ್ಲಿ ಸಾಕಷ್ಟು ರಕ್ಷಣಾ ವೇದಿಕೆಗಳು ಅನಾಥಾಶ್ರಮಗಳು ಹಾಗೆ ನಿರ್ಗತಿಕರ ಆಶ್ರಮಗಳು ಕೂಡ ಸಾಕಷ್ಟು ಇದ್ದರು ಇಂದಿನ ದಿನಮಾನದಲ್ಲೂ ಸಹಿತ ಸಾಕಷ್ಟು ಜನ ಟೆಂಟ್ ವ್ಯವಸ್ಥೆ. ಹಾಗೂ ಬಸ್ ಸ್ಟ್ಯಾಂಡ್ ಗಳಲ್ಲಿ ತಮ್ಮ ಜೀವನವನ್ನು ಸಾಗಿಸುವುದು . ಗುಡಿ ಗುಂಡಾರಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುವುದು ಇವುಗಳನ್ನು ಸಾಕಷ್ಟು ಕಂಡು ಹಾಗೂ ಕೇಳುತ್ತಿದ್ದೇವೆ ಕೂಡ . ಸರ್ಕಾರ ಎಷ್ಟೇ ಯೋಚನೆಗಳನ್ನು ಕೊಟ್ಟರು ಕೂಡ ಕೆಲವೊಂದಿಷ್ಟು ಜನರಿಗೆ ಅವು ತಲುಪಲು ಆಗುತ್ತಿಲ್ಲ ಇಂದಿನವರೆಗೂ ತಲುಪಿಲ್ಲ ಕೂಡ. ಅದಕ್ಕೆ ಜೀವಂತ ಸಾಕ್ಷಿ ಎಂಬಂತೆ ಹುಬ್ಬಳ್ಳಿಯಲ್ಲಿ ನಡೆದ ಘಟನೆ ಉದಾಹರಣೆಯಾಗಿದೆ. ನಿಜಕ್ಕೂ ಇದು ಕರುಳು ಎನ್ನುವ ಘಟನೆ ಕೂಡ ಹೌದು. ಹುಬ್ಬಳ್ಳಿಯಲ್ಲಿ ಓರ್ವತಾಯಿ ಹಾಗೂ ಇಬ್ಬರು ಮಕ್ಕಳು ವಾಸಿಸಲು ಮನೆ ಇಲ್ಲದೆ ಕೇಶವಪುರದ ರಸ್ತೆಯಲ್ಲಿ ಬರುವ ಬಸ್ ಸ್ಟ್ಯಾಂಡ್ ನಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದು . ಇಬ್ಬರು ಮಕ್ಕಳಲ್ಲಿ ಓರ್ವ ಬುದ್ಧಿಮಾಂದ್ಯನಾಗಿದ್ದಾನೆ. ಹಾಗೂ ಇನ್ನೊಬ್ಬ ತನ್ನ ತಮ್ಮನಿಗೆ ಹಾಗೂ ತಾಯಿಗೆ ಭಿಕ್ಷೆಯನ್ನು ಬೇಡಿ ಬಂದ ಹಣದಿಂದ ಊಟವನ್ನು ತಂದು ಕೊಡುತ್ತಿದ್ದ. ತಾಯಿ ಮಗ ಬರುವರೆಗೂ ಕೂಡ ಬುದ್ಧಿಮಾಂದ್ಯ ಮಗನನ್ನು ನೋಡಿಕೊಳ್ಳಲು ಹಗಲಿರುಳು ಶ್ರಮ ಪಡುತ್ತಿದ್ದಳು. ಹೀಗೆ ಅವರ ಜೀವನ ಸಾಗುತ್ತಿತ್ತು . ನಿನ್ನ ಮಗ ಭಿಕ್ಷೆ ಬೇಡಲು ಹೋದಾಗ ತಾಯಿ ಸಾವನ್ನಪ್ಪಿರುವ ಘಟನೆ ನಡೆದು ಹೋಗಿರುತ್ತದೆ. ನಿಜಕ್ಕೂ ಇದು ವಿದ್ರಾವಕ ಎನಿಸುತ್ತಿದೆ. ಸ್ಥಳೀಯರು ಇದನ್ನು ನೋಡಿ . ಮಾಧ್ಯಮಗಳಿಗೆ ತಿಳಿಸಿದ್ದಾರೆ . ಏನೇ ಆಗಲಿ ಸಾಕಷ್ಟು ರಕ್ಷಣಾ ವೇದಿಕೆಗಳು ಅನಾಥಾಶ್ರಮಗಳು ಇವೆಲ್ಲವೂ ಕೂಡ ಇದ್ದು ಈ ತರಹದ ಜೀವನವನ್ನು ಸಾಗಿಸುತ್ತಿರುವ ವ್ಯಕ್ತಿಗಳ ಮೇಲೆ ಇಲಾಖೆಗಳು ಗಮನವಹಿಸಬೇಕು ಎಂದು ಜನರು ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ.

