ಸುದ್ದಿ 

ಸರ್ಕಾರದಿಂದ ಆಂಬುಲೆನ್ಸ್ ಸೇವೆ ಸಿಬ್ಬಂದಿ ಸಿಬ್ಬಂದಿ ನೇಮಕಕ್ಕೆ ಒಪ್ಪಿಗೆ.

Taluknewsmedia.com

ಸರ್ಕಾರದಿಂದ ಆಂಬುಲೆನ್ಸ್ ಸೇವೆ ಸಿಬ್ಬಂದಿ ಸಿಬ್ಬಂದಿ ನೇಮಕಕ್ಕೆ ಒಪ್ಪಿಗೆ.

ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕವಾಗುತ್ತಿಲ್ಲ ಹೊರಗುತ್ತಿಗೆ ಹಾಗೂ ಗುತ್ತಿಗೆಯ ಆಧಾರದ ಮೇಲೆ ನಡೆಯುವಂತಹ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಹೀಗೆ ಸಾವಿರಾರು ವಿಚಾರಗಳು ಮತ್ತೆ ಅವುಗಳ ಗೊಂದಲಗಳಲ್ಲಿ ಇರುವವರಿಗೆ ಸರಕಾರ ಕೊಂಚ ರಿಲೀಫ್ ಕೊಟ್ಟಿದೆ . ರಾಜ್ಯದಲ್ಲಿ ಇದು ಮೊದಲ ಬಾರಿಗೆ ಅಂತ ಹೇಳಬಹುದು 108 ಅಂದ್ರೆ ಆಂಬುಲೆನ್ಸ್ ಸೇವೆ ಮುಖ್ಯವಾಗಿ ಜನರಿಗೆ ತುಂಬಾ ಆರೋಗ್ಯದ ವಿಚಾರದಲ್ಲಿ ಹತ್ತಿರವಾಗಿ ಇರುವಂತದ್ದು. ಈ ಒಂದು ಸೇವೆಯಲ್ಲಿ ಗುತ್ತಿಗೆ ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು. ಎಂದು ಆರೋಗ್ಯ ಇಲಾಖೆ ತಿಳಿಸಿ ಮಂಜೂರು ಕೂಡ ಆಗಿದೆ. ಹಾಗೆ 104 ಸಹಾಯವಾಣಿ ಯೋಜನೆಯನ್ನು ಕೂಡ ಆರೋಗ್ಯ ವತಿಯಿಂದಲೇ ಜಾರಿಗೊಳಿಸಲಾಗುತ್ತದೆ . ಈ ಎರಡು ವಿಭಾಗಕ್ಕೆ ಸಂಬಂಧಪಟ್ಟಹಾಗೆ 3691 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಕ್ಕೆ ಸರ್ಕಾರ ಒಪ್ಪಿಗೆಯನ್ನು ಹಾಗೂ ಮಂಜೂರಾತಿಯನ್ನು ನೀಡಿದೆ. ನರ್ಸಿಂಗ್ ಯಾರ್ ಮಾಡಿದರೂ ಖುಷಿ ಪಡುವಂತ ವಿಚಾರ. ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಐದು ಹೊಸ ಕ್ರಿಟಿಕಲ್ ಗೇರ್ ಬ್ಲಾಕ್ ಗಳಿಗೆ 168 ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಅನುಮೋದನೆ ಕೂಡ ದೊರೆತಿದೆ. ಏನೇ ಆಗಲಿ ಸರ್ಕಾರ ಒಂದೊಂದೇ ಇಲಾಖೆಗಳಲ್ಲಿ ಯಾವ ಹುದ್ದೆಗಳು ಅವಶ್ಯಕತೆ ಇದೆಯೋ ಅವುಗಳನ್ನು ಪೂರ್ಣಗೊಳಿಸುವ ಹಂತವನ್ನು ಮಾಡ್ತಿದೆ ಹೇಳಬಹುದು.

Related posts