ಸುದ್ದಿ 

ವಿಜಯಪುರದಲ್ಲಿ ಡಬಲ್ ಮರ್ಡರ್: ಕಲ್ಲಿನಿಂದ ಜಜ್ಜಿ ಯುವಕರ ನರ್ಹತ್ಯೆ!

Taluknewsmedia.com

ವಿಜಯಪುರದಲ್ಲಿ ಡಬಲ್ ಮರ್ಡರ್: ಕಲ್ಲಿನಿಂದ ಜಜ್ಜಿ ಯುವಕರ ನರ್ಹತ್ಯೆ!

ವಿಜಯಪುರ: ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ದ್ವಿಹತ್ಯೆ ಘಟನೆ ವಿಜಯಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹಳೆಯ ವೈಷಮ್ಯ ಹಿನ್ನೆಲೆ ಇಬ್ಬರು ಯುವಕರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಭೀಕರ ಘಟನೆ ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ ನಡೆದಿದೆ.

ಹತ್ಯೆಗೆ ಒಳಗಾದವರು ಸಾಗರ್ ಬೆಳುಂಡಗಿ (25) ಮತ್ತು ಇಸಾಕ್ ಖುರೇಶಿ (24) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಕಲ್ಲಿನಿಂದ ಹೊಡೆದು ಬರ್ಬರವಾಗಿ ಕೊಲೆಮಾಡಿದ ಆರೋಪದ ಮೇಲೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಮಾಹಿತಿಯ ಪ್ರಕಾರ, ಸುಮಾರು ಎರಡು ವರ್ಷಗಳ ಹಿಂದೆ ಇದೇ ಗ್ರಾಮದ ಈರಣ್ಣಗೌಡ ಎಂಬವರ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಸಾವಿಗೀಡಾದ ಸಾಗರ್ ಮತ್ತು ಇಸಾಕ್‌ ಹೆಸರು ಪ್ರಸ್ತಾಪವಾಗಿತ್ತು. ಇತ್ತೀಚೆಗೆ ಚಿಕಿತ್ಸೆ ಫಲಕಾರಿಯಾಗದೆ ಈರಣ್ಣಗೌಡ ಮೃತಪಟ್ಟಿದ್ದರಿಂದ, ಅದೇ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts