ಸುದ್ದಿ 

ಬಿಜೆಪಿ ಶಾಸಕ ಮುನಿರತ್ನ ಆರೋಪಗಳಿಗೆ ಕುಸುಮಾ ಹನುಮಂತರಾಯಪ್ಪ ತೀವ್ರ ಪ್ರತಿಕ್ರಿಯೆ

Taluknewsmedia.com

ಬಿಜೆಪಿ ಶಾಸಕ ಮುನಿರತ್ನ ಆರೋಪಗಳಿಗೆ ಕುಸುಮಾ ಹನುಮಂತರಾಯಪ್ಪ ತೀವ್ರ ಪ್ರತಿಕ್ರಿಯೆ

ಬಿಜೆಪಿ ಶಾಸಕ ಮುನಿರತ್ನ ಅವರ ಆರೋಪಗಳಿಗೆ ಆರ್‌ಆರ್ ನಗರದ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಅವರು ಮೊದಲ ಬಾರಿಗೆ ಬಾಯ್ಬಿಟ್ಟಿದ್ದಾರೆ. “ಜನರಿಗೆ ಸ್ಪಂದಿಸುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕಾರ್ಯಕ್ರಮವನ್ನು ಹಾಳುಮಾಡುವ ನಿಟ್ಟಿನಲ್ಲಿ ಮುನಿರತ್ನ ರಾಜಕೀಯ ಆಟವಾಡುತ್ತಿದ್ದಾರೆ,” ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಪಾರ್ಕ್‌ಗಳಿಗೆ ಭೇಟಿ ನೀಡಿ ನಾಗರಿಕರ ಅಸಮಾಧಾನ, ಬೇಡಿಕೆ ಹಾಗೂ ಸಮಸ್ಯೆಗಳನ್ನು ನೇರವಾಗಿ ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ಸಾರ್ವಜನಿಕ ಕಾರ್ಯಕ್ರಮದ ಕುರಿತು ಪತ್ರಿಕೆಗಳ ಮೂಲಕ ಜಾಹೀರಾತು ನೀಡಲಾಗಿದ್ದು, ಸ್ಥಳೀಯ ಶಾಸಕರಿಗೂ ಆಹ್ವಾನ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.

“ಆದರೆ ಇಲ್ಲಿ ನಡೆಯುತ್ತಿರುವ ಜನಪರ ಕಾರ್ಯಕ್ರಮಕ್ಕೆ ಬೆಂಬಲ ನೀಡುವ ಬದಲು, ಬಿಜೆಪಿ ಶಾಸಕ ಮುನಿರತ್ನ ಅವರು ಕಾರ್ಯಕ್ರಮವನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ. ಜನರ ಅಭಿವೃದ್ಧಿಗೆ ಅಡ್ಡಿಯಾಗುವ ರಾಜಕೀಯ ನಡೆ ಅಸಹ್ಯಕರ,” ಎಂದು ಕುಸುಮಾ ಹನುಮಂತರಾಯಪ್ಪ ಕಿಡಿಕಾರಿದರು.

ಅವರು ಮುಂದುವರಿದು, “ಜನರ ಹಿತದ ದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ಯಾವುದೇ ಕಾರ್ಯಕ್ಕೆ ತೊಂದರೆ ಕೊಡಲು ಯತ್ನಿಸುವವರ ವಿರುದ್ಧ ಜನರೇ ತೀರ್ಪು ಕೊಡುತ್ತಾರೆ,” ಎಂದು ಎಚ್ಚರಿಸಿದರು.

Related posts