ಸುದ್ದಿ 

ಚಿತ್ರದುರ್ಗದಲ್ಲಿ ಲೋಕಾಯುಕ್ತ ಸಿಡಿಲಿನ ದಾಳಿ – ಕೃಷಿ ಇಲಾಖೆಯ ಎಡಿ ಚಂದ್ರಕುಮಾರ್ ಮನೆ ಸೇರಿ 3 ಕಡೆ ಶೋಧ

Taluknewsmedia.com

ಚಿತ್ರದುರ್ಗದಲ್ಲಿ ಲೋಕಾಯುಕ್ತ ಸಿಡಿಲಿನ ದಾಳಿ – ಕೃಷಿ ಇಲಾಖೆಯ ಎಡಿ ಚಂದ್ರಕುಮಾರ್ ಮನೆ ಸೇರಿ 3 ಕಡೆ ಶೋಧ

ಬೆಳ್ಳಂ ಬೆಳಿಗ್ಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಸಿಡಿಲಿನ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಕೃಷಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರಕುಮಾರ್ ಎಡಿ ಅವರ ವಿರುದ್ಧ ಲೋಕಾಯುಕ್ತ ತನಿಖೆ ಪ್ರಾರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಮೂರು ಕಡೆ ಏಕಕಾಲದಲ್ಲಿ ಶೋಧ ನಡೆಸಿದೆ.

ದಾಳಿ ನಡೆದ ಸ್ಥಳಗಳು:

ತರಳಬಾಳು ನಗರದ ಮನೆ,

ಹೊಳಲ್ಕೆರೆ ತಾಲೂಕು ಕಚೇರಿ,

ಟಿ.ನುಲೇನೂರು ಗ್ರಾಮದ ನಿವಾಸ.

ಲೋಕಾಯುಕ್ತ ಅಧಿಕಾರಿಗಳ ಪ್ರಾಥಮಿಕ ಮಾಹಿತಿಯ ಪ್ರಕಾರ, ಚಂದ್ರಕುಮಾರ್ ಅವರ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪಗಳು ಕೇಳಿಬಂದಿದ್ದು, ಅದರ ಆಧಾರದ ಮೇಲೆ ಶೋಧ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

ಶೋಧ ಕಾರ್ಯಾಚರಣೆಯ ವೇಳೆ ಅಧಿಕಾರಿಗಳು ವಿವಿಧ ದಾಖಲೆಗಳು, ಬ್ಯಾಂಕ್ ಪಾಸ್‌ಬುಕ್‌ಗಳು, ಆಸ್ತಿ ದಾಖಲೆಗಳು, ಚಿನ್ನ-ಬೆಳ್ಳಿ ವಸ್ತುಗಳ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಬಳಿಕ ವರದಿ ತಯಾರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ದಾಳಿ ಕಾರ್ಯಾಚರಣೆ ಲೋಕಾಯುಕ್ತ ಎಸ್ಪಿ ವಾಸುದೇವ್ ರಾಮ್ ಅವರ ನೇತೃತ್ವದಲ್ಲಿ ನಡೆದಿದ್ದು, ಸ್ಥಳೀಯ ಪೊಲೀಸರು ಹಾಗೂ ಲೋಕಾಯುಕ್ತ ತಾಂತ್ರಿಕ ತಂಡ ಸಹಕರಿಸುತ್ತಿದೆ.

ಅಧಿಕೃತ ಮೂಲಗಳ ಪ್ರಕಾರ, ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಹಾಗೂ ಹೆಚ್ಚಿನ ಅಕ್ರಮ ಆಸ್ತಿ ಪತ್ತೆ ಸಾಧ್ಯತೆಗಳಿವೆ.

Related posts