ಸುದ್ದಿ 

ಕೋಟೆ ಗಣಪತಿ ವಿಸರ್ಜನೆಗಾಗಿ ಸಿಂಗಾರಗೊಂಡಿರುವ ನಾಗಮಂಗಲ

Taluknewsmedia.com

ಕೋಟೆ ಗಣಪತಿ ವಿಸರ್ಜನೆಗಾಗಿ ಸಿಂಗಾರಗೊಂಡಿರುವ ನಾಗಮಂಗಲ

ಇಂದು ನಾಗಮಂಗಲ ಪಟ್ಟಣದಲ್ಲಿ ವೈಭವಯುತ ಮೆರವಣಿಗೆಯೊಂದಿಗೆ 73ನೇ ವರ್ಷದ ಕೋಟೆ ಗಣಪತಿ ವಿಸರ್ಜನಾ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

        ಪಟ್ಟಣದ ಮುಖ್ಯ ರಸ್ತೆಗಳಲ್ಲೆಲ್ಲ ವಿದ್ಯುತ್ ದೀಪ ಭಗವಾದ್ವಜ ಕೇಸರಿ ಬಂಟಿಂಗ್ಸ್ ಗಳು ರಾರಾಜಿಸುತ್ತಿದ್ದು ಪಟ್ಟಣವು ಪ್ರಮುಖ ಹಿಂದೂ ಧಾರ್ಮಿಕ ಕ್ಷೇತ್ರದಂತೆ ಕಂಗೊಳಿಸುತ್ತಿದೆ.

ಗಣಪತಿ ಮೂರ್ತಿ ಪ್ರತಿಷ್ಠಾಪನೆಯಿಂದಿಡಿದು ಇಂದಿನವರೆಗೂ ಪ್ರತಿನಿತ್ಯವೂ  ವಿಶೇಷ ಪೂಜಾ ವಿಧಿ ವಿಧಾನಗಳು ಜರುಗಿವೆ.

ಯಶಸ್ವಿಯಾದ ಅನ್ನ ಸಂತರ್ಪಣ ಕಾರ್ಯಕ್ರಮ:

ದಿ:15/10/25 ರಂದು ಕೋಟೆ ಗಣಪತಿ ಸೇವಾ ಸಮಿತಿಯಿಂದ ಜರುಗಿದ ಅನ್ನ ಸಂತರ್ಪಣ ಕಾರ್ಯಕ್ರಮದಲ್ಲಿ ಸು 9000 ಮಂದಿ ಪ್ರಸಾದ ಸ್ವೀಕರಿಸಿ ವಿನಾಯಕನ ಕೃಪೆಗೆ ಪಾತ್ರರಾದರು.

ಟಿ ಮರಿಯಪ್ಪ ವೃತ್ತದ ಮಹಾದ್ವಾರ ಪ್ರಮುಖ ಆಕರ್ಷಣೆ:

ಬೀದರ್ – ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಹಾಗೂ ಕೆ ಎಸ್ ಟಿ ರಸ್ತೆ ಸಂಧಿಸುವ ಟಿ ಮರಿಯಪ್ಪ ವೃತ್ತದಲ್ಲಿ ನಿರ್ಮಿಸಿರುವ ಭಜರಂಗಿ ಹಾಗೂ ಶ್ರೀರಾಮಚಂದ್ರ ಲಕ್ಷ್ಮಣರ ಪ್ರತಿಮೆ ಇರುವ ಮಹಾದ್ವಾರವು ದಾರಿಹೋಕರ ನಯನ ಚಿತ್ತಗಳನ್ನು ಆಕರ್ಷಿಸುತ್ತಿದ್ದು ಹಿಂದುತ್ವದ ಭಾವವನ್ನು ಪ್ರತಿಯೊಬ್ಬ ನೋಡುಗರಲ್ಲೂ ಮೂಡಿಸುವಂತಿದೆ.

ಸುಮಾರು 25,000 ಜನರು ಭಾಗಿಯಾಗುವ ನಿರೀಕ್ಷೆ :
ಇಂದು ನೆಡೆಯುವ ಶೋಭಾಯಾತ್ರೆಯಲ್ಲಿ ಸರಿಸುಮಾರು 25,000 ಜನರು ಹಾಗೂ ನೂರಾರು ಕಲಾ ತಂಡಗಳು ಭಾಗಿಯಾಗುವ ನಿರೀಕ್ಷೆಯಿದ್ದು ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮೆರವಣಿಗೆಯಲ್ಲಿ ಭಾಗಿಯಾಗಿಲು ನಿರ್ಧರಿಸಿದ್ದಾರೆ. ಇಂದು ನೆಡೆಯಬೇಕಿದ್ದ ಸಂತೆಯನ್ನು ಗಣಪತಿ ವಿಸರ್ಜನೆ ನಿಮಿತ್ತ ನಿನ್ನೆಯೇ ನೆಡೆಸಲಾಗಿದೆ. ನಾಗಮಂಗಲದ ಹಿಂದೂ ಧಾರ್ಮಿಕ ಪ್ರತೀಕವೇ ಆಗಿರುವ ಕೋಟೆ ಗಣಪತಿ ವಿಸರ್ಜನ ಕಾರ್ಯಕ್ರಮಕ್ಕೆ ಪಟ್ಟಣ ಹಾಗೂ ತಾಲೂಕಿನ ಜನರು ಐಕ್ಯತೆಯಿಂದ ಭಾಗಿಯಾಗಿ ಯಶಸ್ವಿಗೊಳಿಸುವುದು ಪ್ರತಿ ವರ್ಷವೂ ರೂಢಿಯಾಗಿ ನೆಡೆದುಬಂದಿದೆ.

ಪೊಲೀಸ್ ಬಿಗಿ ಬಂದೋಬಸ್ತ್..

ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರ ನೇತೃತ್ವದಲ್ಲಿ ಮೆರವಣಿಗೆ ಹಾಗೂ ವಿಸರ್ಜನಾ ಕಾರ್ಯಕ್ರಮಗಳಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.ಗುರುವಾರ ಸಂಜೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನೂರಾರು ಪೊಲೀಸರು ಪರೇಡ್ ನೆಡೆಸುವ ಮೂಲಕ ಸಾರ್ವಜನಿಕರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಿದ್ಧತೆಯ ಮುನ್ಸೂಚನೆ ನೀಡಿದರು.

ವರದಿ- ಕೌಶಿಕ್ ತಟ್ಟೇಕೆರೆ

Related posts