ಸುದ್ದಿ 

ವೈದ್ಯ ಬಸವರಾಜ್ ಗುರುಲಿಂಗಪ್ಪ ಕಿಡ್ನಾಪ್ ಪ್ರಕರಣ – ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಪ್ಪಾಸಾಹೇಬ್ ಜನವಾಡ ಸೇರಿ ಇಬ್ಬರು ಅರೆಸ್ಟ್!

Taluknewsmedia.com

ವೈದ್ಯ ಬಸವರಾಜ್ ಗುರುಲಿಂಗಪ್ಪ ಕಿಡ್ನಾಪ್ ಪ್ರಕರಣ – ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಪ್ಪಾಸಾಹೇಬ್ ಜನವಾಡ ಸೇರಿ ಇಬ್ಬರು ಅರೆಸ್ಟ್!

ಬೆಂಗಳೂರು: ರಾಜ್ಯವನ್ನು ಬೆಚ್ಚಿಬೀಳಿಸಿದ ವೈದ್ಯರ ಅಪಹರಣ ಪ್ರಕರಣಕ್ಕೆ ಹೊಸ ತಿರುವು ಬಂದಿದೆ. ಬಾಗಲಕೋಟೆ ಜಿಲ್ಲೆಯ ಹುನನಾಪುರ ಮೂಲದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಪ್ಪಾಸಾಹೇಬ್ ಜನವಾಡ ಹಾಗೂ ಅವರ ಸಂಬಂಧಿ ಮಂಜು ರೂಗಿರನ್ನು ಚಂದ್ರಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮೂರು ತಿಂಗಳ ಹಿಂದೆ ನಡೆದಿದ್ದ ಈ ಅಪಹರಣ ಪ್ರಕರಣದಲ್ಲಿ ಆರೋಪಿಗಳು ವೈದ್ಯ ಬಸವರಾಜ್ ಗುರುಲಿಂಗಪ್ಪರನ್ನು ಜುಲೈ 17ರಂದು ವಿಜಯನಗರದ ಅತ್ತಿಗುಪ್ಪೆ ಪ್ರದೇಶದಿಂದ ಕಾರಿನಲ್ಲಿ ಅಪಹರಿಸಿ ನೇರವಾಗಿ ಬಾಗಲಕೋಟೆಗೆ ಕರೆದೊಯ್ದಿದ್ದರು. ನಂತರ 75 ಲಕ್ಷ ರೂ. ಹಣಕ್ಕೆ ಕುಟುಂಬದಿಂದ ಬೇಡಿಕೆ ಇಟ್ಟಿದ್ದರು.

ಅಪಹರಣದ ಮರುದಿನವೇ ವೈದ್ಯರ ಕುಟುಂಬಕ್ಕೆ ಕರೆ ಮಾಡಿ “ಹಣವನ್ನು ಅಕೌಂಟ್‌ಗೆ ಜಮೆ ಮಾಡದಿದ್ದರೆ ಅನಿಷ್ಟ ಆಗುತ್ತದೆ” ಎಂದು ಬೆದರಿಕೆ ಹಾಕಿದ ಆರೋಪ. ಈ ಕುರಿತು ವೈದ್ಯರ ಸೋದರಪುತ್ರ ಮಹಾಂತೇಶ್ ಯಂಡಗೇರಿ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ಆಧಾರದಲ್ಲಿ ಪೊಲೀಸರು ತಕ್ಷಣ ಎಫ್‌ಐಆರ್ ದಾಖಲಿಸಿ ಅಪಹರಣಗೊಂಡ ವೈದ್ಯರನ್ನು ಸುರಕ್ಷಿತವಾಗಿ ರಕ್ಷಿಸಿದ್ದರು. ಬಳಿಕ ಆರೋಪಿಗಳು ಮೂರು ತಿಂಗಳ ಕಾಲ ಪರಾರಿಯಾಗಿದ್ದು, ಸುಳಿವಿನ ಆಧಾರದ ಮೇಲೆ ಚಂದ್ರಲೇಔಟ್ ಪೊಲೀಸರು ಇಬ್ಬರನ್ನೂ ಪತ್ತೆಹಚ್ಚಿ ಬಂಧಿಸಿದ್ದಾರೆ.

ಈಗ ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಅಪಹರಣದ ಹಿನ್ನಲೆ ಹಾಗೂ ಇತರ ಸಹಚರರ ಪತ್ತೆಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

Related posts