ಸುದ್ದಿ 

ಕಡಿಮೆ ಬಡ್ಡಿಗೆ ಲೋನ್ ಕೊಡಿಸ್ತೀನಿ ಅಂತ ಜನರನ್ನು ವಂಚಿಸಿದ ಮಹಿಳೆ ಬಂಧನ

Taluknewsmedia.com

ಕಡಿಮೆ ಬಡ್ಡಿಗೆ ಲೋನ್ ಕೊಡಿಸ್ತೀನಿ ಅಂತ ಜನರನ್ನು ವಂಚಿಸಿದ ಮಹಿಳೆ ಬಂಧನ

ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುತ್ತೇನೆ ಎಂದು ನಂಬಿಸಿ ಜನರನ್ನು ವಂಚಿಸಿದ ಮಹಿಳೆ ಬಂಧನಕ್ಕೆ ಒಳಗಾಗಿದ್ದಾಳೆ. ಬಂಧಿತಳನ್ನು ನಯನಾ ಎಂದು ಗುರುತಿಸಲಾಗಿದೆ. ನಯನಾ ವಿರುದ್ಧ ಕ್ರಮ ಕೈಗೊಂಡಿರುವವರು ಬಸವೇಶ್ವರ ನಗರ ಪೊಲೀಸರು, ಅವರು ಬಂಧನದ ಬಳಿಕ ಆಕೆಯನ್ನು ಪರಪ್ಪನ ಅಗ್ರಹಾರ ಸೆರೆಮನೆಗೆ ಕಳುಹಿಸಿದ್ದಾರೆ.

ವಂಚನೆ ಹೇಗೆ ನಡೆದಿದೆ:

ನಯನಾ, “ಸುಬ್ಬಲಕ್ಷ್ಮಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್” ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೇಕಡಾ 1% ಬಡ್ಡಿದರದಲ್ಲಿ ಸಾಲ ಕೊಡಿಸುತ್ತೇನೆ ಎಂದು ಜನರನ್ನು ನಂಬಿಸಿದ್ದಳು. ಆಕೆ ಮತ್ತು ಆಕೆಯ ಸಹಚರರು ಸಾಲ ಪಡೆಯುವ ಮೊದಲು ಮೂರು ತಿಂಗಳ ಇ.ಎಂ.ಐ ಮುಂಗಡವಾಗಿ ಕಟ್ಟಬೇಕು ಎಂದು ಹೇಳಿ ಹಣ ಪಡೆದುಕೊಂಡಿದ್ದಾರೆ.

ಸುಮಾರು 15 ಜನರಿಂದ ಪ್ರತಿ ತಲೆಗೆ 30,000 ರೂಪಾಯಿ ಪಡೆದಿದ್ದು, ಒಟ್ಟು ₹12,22,000 ರಷ್ಟು ಮೊತ್ತವನ್ನು ವಂಚನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿದಾಗ, ನಯನಾ ಇದೇ ರೀತಿಯ ವಂಚನೆಗಳನ್ನು ಬಸವೇಶ್ವರನಗರ ಮತ್ತು ಅನ್ನಪೂರ್ಣೇಶ್ವರಿನಗರ ಪ್ರದೇಶಗಳಲ್ಲಿ ಸಹ ನಡೆಸಿದ್ದಾಳೆ ಎಂಬುದು ಬಹಿರಂಗವಾಗಿದೆ.

Related posts