ವಿದೇಶಿ ಉದ್ಯಮಿಯ ಪ್ರಶ್ನೆಗೆ ಕಿರಣ್ ಮಜುಂದಾರ್ ಶಾ ಟ್ವಿಟ್ — ಎಕ್ಸ್ನಲ್ಲಿ ಚರ್ಚೆ ಜೋರಾಯಿತು!
ವಿದೇಶಿ ಉದ್ಯಮಿಯ ಪ್ರಶ್ನೆಗೆ ಕಿರಣ್ ಮಜುಂದಾರ್ ಶಾ ಟ್ವಿಟ್ — ಎಕ್ಸ್ನಲ್ಲಿ ಚರ್ಚೆ ಜೋರಾಯಿತು!
ಬಯೋಕಾನ್ ಪಾರ್ಕ್ಗೆ ಭೇಟಿ ನೀಡಿದ ವಿದೇಶಿ ಉದ್ಯಮಿಯೊಬ್ಬರು ಬೆಂಗಳೂರಿನ ರಸ್ತೆ ಹಾಗೂ ಸ್ವಚ್ಛತೆಯ ಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಳಿಕ, ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರ ಟ್ವಿಟ್ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಉದ್ಯಮಿ.
“ಬೆಂಗಳೂರುಂತಹ ವಿಶ್ವಪ್ರಸಿದ್ಧ ಐಟಿ ಹಬ್ನಲ್ಲಿ ರಸ್ತೆಗಳಲ್ಲಿ ಇಷ್ಟು ಗುಂಡಿಗಳು? ಎಲ್ಲೆಲ್ಲೂ ಕಸಕಡ್ಡಿ? ಸರ್ಕಾರ ಹೂಡಿಕೆಗೆ ಆಸಕ್ತಿ ತೋರಿಸುತ್ತಿಲ್ಲವೇ? ನಾನು ಚೀನಾದಿಂದ ಬಂದಿದ್ದೇನೆ : ಅಲ್ಲಿ ಮೂಲಸೌಕರ್ಯ ಶ್ರೇಷ್ಟ. ಭಾರತ ಮಾತ್ರ ಕ್ರಮ ಕೈಗೊಳ್ಳದೆ ಇರುವುದೇಕೆ?”
ಎಂದು ಪ್ರಶ್ನಿಸಿದ್ದಾರೆ ಎಂದು ಶಾ ಅವರು ಬರೆದಿದ್ದಾರೆ.
ಈ ಕುರಿತು ತಮ್ಮ ಟ್ವಿಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆರನ್ನು ಟ್ಯಾಗ್ ಮಾಡಿ ಶಾ ಅವರು ಗಮನಸೆಳೆದಿದ್ದಾರೆ.
ಎಕ್ಸ್ನಲ್ಲಿ ಪರ-ವಿರೋಧ ಅಭಿಪ್ರಾಯಗಳ ಮಳೆ..
ಶಾ ಅವರ ಟ್ವಿಟ್ ಬಳಿಕ ಎಕ್ಸ್ನಲ್ಲಿ ಚರ್ಚೆ ಚುರುಕುಗೊಂಡಿದೆ. ಕೆಲವರು ಶಾ ಅವರ ಅಭಿಪ್ರಾಯವನ್ನು ಬೆಂಬಲಿಸಿ, ನಗರದಲ್ಲಿ ಮೂಲಸೌಕರ್ಯ ಸುಧಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರೆ, ಮತ್ತೊಬ್ಬರು ಅವರ ಕಾಮೆಂಟ್ನ್ನು ಟೀಕಿಸಿದ್ದಾರೆ.
ನೆಟ್ಟಿಗ ದಿನೇಶ್ ಜೋಶಿ ಪ್ರತಿಕ್ರಿಯೆ ನೀಡುತ್ತಾ :
“ಮಧ್ಯಪ್ರದೇಶದ ಇಂದೋರ್ ನಗರವನ್ನು ಮಾದರಿಯಾಗಿ ತೆಗೆದುಕೊಳ್ಳಿ. ದಿನಕ್ಕೆ 550 ಟನ್ ಘನತ್ಯಾಜ್ಯವನ್ನು ಕೇವಲ 20 ಟನ್ ಸಿಬಿಜಿಗೆ ಪರಿವರ್ತಿಸಲಾಗುತ್ತಿದೆ. ಭಾರತೀಯ ಕಂಪನಿಯೇ ಈ ಸಾಧನೆ ಮಾಡಿದೆ,” ಎಂದು ಸಲಹೆ ನೀಡಿದ್ದಾರೆ.
‘ದಿ ಐರನ್ ವಾಯ್ಸ್’ ಎಂಬ ನೆಟ್ಟಿಗನೊಬ್ಬ :
“ಬೆಂಗಳೂರು ಅಭಿವೃದ್ಧಿಗೆ ಮುನ್ನ, ಲಂಚದ ಸಂಸ್ಕೃತಿಗೆ ಕೊನೆಗಾಣಬೇಕು. ಬಿಬಿಎಂಪಿ ಅಲಿಯಾಸ್ ‘ಜಿಬಿಎ’ಯಲ್ಲಿ ಲಂಚವಿಲ್ಲದೆ ಬೆರಳು ಕೂಡ ಆಡುವುದಿಲ್ಲ,” ಎಂದು ಸಿಡಿದೆದ್ದಿದ್ದಾರೆ.
ಬಯೋಕಾನ್ ಪಾರ್ಕ್ನ ಘಟನೆಯೊಂದೇ ಬೆಂಗಳೂರಿನ ರಸ್ತೆ, ಸ್ವಚ್ಛತೆ ಮತ್ತು ಆಡಳಿತ ವ್ಯವಸ್ಥೆ ಕುರಿತ ಚರ್ಚೆಗೆ ಹೊಸ ಸ್ಪೂರ್ತಿ ನೀಡಿದಂತಾಗಿದೆ.

