ಸಿನೆಮಾ ಸುದ್ದಿ 

ದರ್ಶನ್ ಜೈಲು ದೂರುಗಳ ಹಿಂದೆ ಸತ್ಯ ಬಯಲಾಗ್ತು! ಕಾನೂನು ಪ್ರಾಧಿಕಾರದ ವರದಿ ಬಹಿರಂಗ

Taluknewsmedia.com

ದರ್ಶನ್ ಜೈಲು ದೂರುಗಳ ಹಿಂದೆ ಸತ್ಯ ಬಯಲಾಗ್ತು! ಕಾನೂನು ಪ್ರಾಧಿಕಾರದ ವರದಿ ಬಹಿರಂಗ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ನಟ ದರ್ಶನ್, ಜೈಲು ಪರಿಸ್ಥಿತಿಯನ್ನು ಕುರಿತು ಹಲವು ದೂರನ್ನು ಮಾಡುತ್ತಿದ್ದರು. ಆದರೆ ಇದೀಗ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕೃತ ವರದಿ ಅವರ ಹೇಳಿಕೆಗಳ ನಿಜಾಸತ್ಯ ಬಯಲು ಮಾಡಿದೆ.

ಪ್ರಾಧಿಕಾರದ ಅಧಿಕಾರಿಗಳು ಇತ್ತೀಚೆಗೆ ಜೈಲಿಗೆ ಭೇಟಿ ನೀಡಿ, ದರ್ಶನ್ ಅವರ ಆರೋಗ್ಯ, ಸೆಲ್‌ ವ್ಯವಸ್ಥೆ ಹಾಗೂ ದಿನನಿತ್ಯದ ಪರಿಸ್ಥಿತಿ ಪರಿಶೀಲಿಸಿ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ 10 ಪುಟಗಳ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ದರ್ಶನ್ ನೀಡಿದ ಅನೆಕ ಆರೋಪಗಳಿಗೆ ವಿರುದ್ಧವಾಗಿ ಹಲವಾರು ನಿಜಾಂಶಗಳು ಬಯಲಾಗಿದೆ.

ವರದಿ ಪ್ರಕಾರ, ದರ್ಶನ್ ಇರುವ ಸೆಲ್‌ನಲ್ಲಿ ಭಾರತೀಯ ಹಾಗೂ ಪಾಶ್ಚಾತ್ಯ ಶೈಲಿಯ ಎರಡು ಶೌಚಾಲಯಗಳ ವ್ಯವಸ್ಥೆ ಇದೆ. ಹಾಸಿಗೆ ಮತ್ತು ದಿಂಬು ನೀಡಿಲ್ಲ ಎಂಬ ಅವರ ಆರೋಪಕ್ಕೆ ಸಂಬಂಧಿಸಿ, ವಿಚಾರಣಾಧೀನ ಕೈದಿಗಳಿಗೆ ಹೆಚ್ಚುವರಿ ಹಾಸಿಗೆ ಅಥವಾ ದಿಂಬು ನೀಡುವ ನಿಯಮವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ದರ್ಶನ್ “ಬಿಸಿಲಿಗೆ ಬಿಡ್ತಿಲ್ಲ” ಎಂದು ದೂರಿದ್ದರೂ, ಪ್ರತಿದಿನ ಒಂದು ಗಂಟೆ ವಾಕಿಂಗ್ ಹಾಗೂ ಆಟಕ್ಕೆ ಅವಕಾಶ ನೀಡಲಾಗುತ್ತದೆ ಎಂದು ವರದಿ ತಿಳಿಸಿದೆ. ಆದರೆ ಅವರು ಹೆಚ್ಚು ಓಡಾಡಿದರೆ ಇತರ ಕೈದಿಗಳು ಕಿರುಚುವಂತಹ ಘಟನೆಗಳು ಸಂಭವಿಸುತ್ತವೆ ಎಂಬುದನ್ನೂ ಅಧಿಕಾರಿಗಳು ದಾಖಲಿಸಿದ್ದಾರೆ.

ಟಿವಿ ನೀಡಿಲ್ಲ ಎಂಬ ಆರೋಪವೂ ನಿಜವಲ್ಲ ಎಂದು ವರದಿ ಹೇಳುತ್ತದೆ. ಜೈಲಿನ ಕೈದಿಗಳಿಗೆ ಸಾಮಾನ್ಯವಾಗಿ ಟಿವಿ ವೀಕ್ಷಣೆಗೆ ಅವಕಾಶ ಇದೆ, ಆದರೆ ಪ್ರತ್ಯೇಕ ಟಿವಿ ನೀಡುವ ವ್ಯವಸ್ಥೆ ಇಲ್ಲ. ಕುಟುಂಬದೊಂದಿಗೆ ಕರೆ ಮಾತನಾಡುವ ವೇಳೆ ಲೌಡ್‌ಸ್ಪೀಕರ್‌ ಮೂಲಕ ಮಾತನಾಡುವಂತೆ ಸೂಚನೆ ನೀಡುವುದು ಜೈಲಿನ ನಿಯಮ ಪ್ರಕಾರವೇ ಎಂದು ಸ್ಪಷ್ಟಪಡಿಸಲಾಗಿದೆ.

ಇನ್ನೂ ದರ್ಶನ್ ಹೇಳಿದ್ದಂತೆ “ಬಿಸಿಲಿಗೆ ಹೋಗದೆ ಕಾಲಿಗೆ ಫಂಗಸ್‌ ಬಂದಿದೆ” ಎಂಬ ದೂರಿನ ಕುರಿತು ಚರ್ಮ ತಜ್ಞೆ ಡಾ. ಜ್ಯೋತಿ ಅವರ ಪರೀಕ್ಷೆಯ ಪ್ರಕಾರ, ಅವರಿಗೆ ಫಂಗಸ್‌ ಇರದೇ ಹಿಮ್ಮಡಿ ಒಡೆದ ಸಮಸ್ಯೆ ಇದೆ ಎಂದು ವರದಿ ಹೇಳಿದೆ.

ಸೊಳ್ಳೆ ಬತ್ತಿ, ಕನ್ನಡಿ, ಬಾಚಣಿಕೆ ನೀಡಿಲ್ಲ ಎಂಬ ಆರೋಪಗಳೂ ಸುಳ್ಳು ಎಂದು ಸ್ಪಷ್ಟವಾಗಿದೆ, ಏಕೆಂದರೆ ಇವು ದೋಷಿಗಳಿಗೇ ಮಾತ್ರ ನೀಡುವ ಸೌಲಭ್ಯಗಳು, ವಿಚಾರಣಾಧೀನ ಕೈದಿಗಳಿಗೆ ನೀಡುವ ನಿಯಮವಿಲ್ಲ.

ಒಟ್ಟಿನಲ್ಲಿ, ಕಾನೂನು ಸೇವೆಗಳ ಪ್ರಾಧಿಕಾರದ ಈ ವರದಿ ಪ್ರಕಾರ, ನಟ ದರ್ಶನ್ ಮಾಡಿದ್ದ ಅನೇಕ ದೂರಗಳು ತಪ್ಪು ಅಥವಾ ಅತಿರಂಜಿತವಾಗಿವೆ ಎಂಬುದು ದೃಢವಾಗಿದೆ.

ಬಯಲಾಗಿದ ಈ ವರದಿ ಈಗ ನ್ಯಾಯಾಲಯದ ಮುಂದೆ ಪ್ರಸ್ತುತವಾಗಿದೆ — ದರ್ಶನ್ ಅವರ ಆರೋಪಗಳ ನಿಜಾಸತ್ಯಕ್ಕೆ ಇದೀಗ ಕಾನೂನು ತೀರ್ಪೇ ಉತ್ತರ ನೀಡಬೇಕಿದೆ.

Related posts