ಹಾವೇರಿ: ಲಂಚದ ಬಲೆಗೆ ಶಿರಸ್ತೇದಾರ ಸೇರಿದಂತೆ 3 ಅಧಿಕಾರಿಗಳು ಬಿದ್ದಿದ್ದಾರೆ
ಹಾವೇರಿ: ಲಂಚದ ಬಲೆಗೆ ಶಿರಸ್ತೇದಾರ ಸೇರಿದಂತೆ 3 ಅಧಿಕಾರಿಗಳು ಬಿದ್ದಿದ್ದಾರೆ
ಹಾವೇರಿ: ಹಾನಗಲ್ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಲಂಚಕಾಮಕ್ಕೆ ಮುಂಜಾನೆಯಿಂದ ತೊಡಗಿದ್ದ ಶಿರಸ್ತೇದಾರ, ಸಹಾಯಕರು ಹಾಗೂ ಇತರ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಆರೋಪಿಗಳ ಹೆಸರುಗಳು:
ಶಿರಸ್ತೇದಾರ ತಮ್ಮಣ್ಣ ಕಾಂಬಳೆ
ದ್ವಿತೀಯ ದರ್ಜೆ ಸಹಾಯಕರು ಗೂಳಪ್ಪ ಮನಗೂಳಿ ಮತ್ತು ಶಿವಾನಂದ ಬಡಿಗೇರ
ಘಟನೆಯ ಹಿನ್ನೆಲೆ: ಬೊಮ್ಮನಹಳ್ಳಿ ಗ್ರಾಮದ ಶಂಕ್ರಪ್ಪ ಗುಮಗುಂಡಿ ಅವರು ತಮ್ಮ ಆರ್ಟಿಸಿ ದುರಸ್ತಿ ಕಾರ್ಯಕ್ಕೆ ಸಂಬಂಧಿಸಿದಂತೆ ₹12,000 ಲಂಚ ಕೊಡುತ್ತಿದ್ದ ವೇಳೆ ಅಧಿಕಾರಿಗಳು ಲೋಕುಾಯಕ್ತರು ರೆಡ್ಹ್ಯಾಂಡ್ ಆಗಿ ಬಂಧನೆಗೆ ಒಳಪಟ್ಟರು. ಈ ಕುರಿತು ನವೀನ್ ಪಾಟೀಲ ಅವರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಪ್ರಕರಣವನ್ನು ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

