ಸುದ್ದಿ 

ಬೆಂಗಳೂರಿನಲ್ಲಿ ವೈದ್ಯನ ಬಂಧನ — ಯುವತಿಗೆ ಅಸಭ್ಯ ವರ್ತನೆ, ಲೈಂಗಿಕ ಬೇಡಿಕೆ ಆರೋಪ

Taluknewsmedia.com

ಬೆಂಗಳೂರಿನಲ್ಲಿ ವೈದ್ಯನ ಬಂಧನ — ಯುವತಿಗೆ ಅಸಭ್ಯ ವರ್ತನೆ, ಲೈಂಗಿಕ ಬೇಡಿಕೆ ಆರೋಪ

ಬೆಂಗಳೂರು ನಗರದ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಚರ್ಮ ರೋಗ ತಜ್ಞ ವೈದ್ಯನೊಬ್ಬ ಅಸಭ್ಯ ವರ್ತನೆ ಹಾಗೂ ಲೈಂಗಿಕ ಕಿರುಕುಳ ಆರೋಪದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾನೆ.

ಬಂಧಿತನನ್ನು ಅಸ್ಟೀನ್ ಟೌನ್ ನಿವಾಸಿ ಡಾ. ಪ್ರವೀಣ್ ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ಚಿಕಿತ್ಸೆಗೆಂದು ಈ ವೈದ್ಯನ ಕ್ಲಿನಿಕ್‌ಗೆ ಭೇಟಿ ನೀಡಿದ್ದರು.

ಚಿಕಿತ್ಸೆಯ ಸಮಯದಲ್ಲಿ ವೈದ್ಯ ಯುವತಿಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಷ್ಟೇ ಅಲ್ಲದೆ, ಲೈಂಗಿಕ ಕ್ರೀಯೆಗೆ ಬೇಡಿಕೆಯೂ ಇಟ್ಟಿದ್ದಾನೆಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯಿಂದ ಬೆಚ್ಚಿಬಿದ್ದ ಯುವತಿ ವಿಷಯವನ್ನು ತಕ್ಷಣವೇ ತನ್ನ ಪೋಷಕರಿಗೆ ತಿಳಿಸಿದ್ದಾರೆ. ನಂತರ ಪೋಷಕರು ಕ್ಲಿನಿಕ್‌ಗೆ ಬಂದು ಪ್ರತಿಭಟಿಸಿದ ನಂತರ ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನನ್ವಯ ಪೊಲೀಸರು ವೈದ್ಯ ಪ್ರವೀಣ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅಸಭ್ಯ ವರ್ತನೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿ, ಬಂಧಿಸಿದ್ದಾರೆ.

ಅಶೋಕನಗರ ಪೊಲೀಸರು ಪ್ರಕರಣವನ್ನು ತನಿಖೆ ಕೈಗೊಂಡಿದ್ದು, ವೈದ್ಯನ ಮೊಬೈಲ್ ಮತ್ತು ಕ್ಲಿನಿಕ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ.

Related posts