ಸುದ್ದಿ 

ಶಿವಮೊಗ್ಗ : ದೀಪಾವಳಿ ಸಂಭ್ರಮದ ಮಧ್ಯೆ ವಡ್ಡಿನಕೊಪ್ಪದಲ್ಲಿ ಕಳ್ಳತನದ ಘಟನೆ ನಡೆದಿದೆ. ಕರಿಯಪ್ಪ ಹಾಗೂ ಯಶೋದಮ್ಮ ಎಂಬುವವರ ಮನೆಗೆ ನುಗ್ಗಿದ ಕಳ್ಳರು ಬಾಗಿಲಿನ ಬೀಗ ಒಡೆದು ನಗದು ಹಾಗೂ ಬಂಗಾರ ಎಗರಿಸಿದ್ದಾರೆ.

Taluknewsmedia.com

ಶಿವಮೊಗ್ಗ : ದೀಪಾವಳಿ ಸಂಭ್ರಮದ ಮಧ್ಯೆ ವಡ್ಡಿನಕೊಪ್ಪದಲ್ಲಿ ಕಳ್ಳತನದ ಘಟನೆ ನಡೆದಿದೆ. ಕರಿಯಪ್ಪ ಹಾಗೂ ಯಶೋದಮ್ಮ ಎಂಬುವವರ ಮನೆಗೆ ನುಗ್ಗಿದ ಕಳ್ಳರು ಬಾಗಿಲಿನ ಬೀಗ ಒಡೆದು ನಗದು ಹಾಗೂ ಬಂಗಾರ ಎಗರಿಸಿದ್ದಾರೆ.

ಮನೆಯವರು ಹಬ್ಬದ ನಿಮಿತ್ತ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಈ ಕೃತ್ಯ ನಡೆದಿದೆ. ಕಳ್ಳರು ಮನೆಯೊಳಗಿನಿಂದ ₹80,000 ನಗದು ಮತ್ತು ಸುಮಾರು 1 ತೊಲೆ ಬಂಗಾರವನ್ನು ಕಳವು ಮಾಡಿದ್ದಾರೆ.

ಘಟನೆ ನಿನ್ನೆ ತಡರಾತ್ರಿ ನಡೆದಿದ್ದು, ಬೆಳಗಿನ ಜಾವ ಬೀಗ ಒಡೆದಿರುವುದನ್ನು ಗಮನಿಸಿದ ನೆರೆಹೊರೆಯವರು ಮಾಲೀಕರಿಗೆ ಮಾಹಿತಿ ನೀಡಿದರು.

ಮಾಹಿತಿ ತಿಳಿದ ತಕ್ಷಣ ತುಂಗಾನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.

ಹಬ್ಬದ ಸಮಯದಲ್ಲಿ ಮನೆ ಬೀಗ ಹಾಕಿ ಹೊರಗೆ ಹೋಗುವ ನಾಗರಿಕರು ಎಚ್ಚರಿಕೆ ವಹಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

Related posts