ಸರ್ಕಾರ ಮಾಡಬೇಕಾದ ಕಾರ್ಯಗಳನ್ನು ಶ್ರೀಮಠ ಮಾಡುತ್ತಿರುವುದು ಹೆಮ್ಮೆಯ ವಿಚಾರ: ಶರಣ ಪ್ರಕಾಶ್ ಪಾಟೀಲ್
ಸರ್ಕಾರ ಮಾಡಬೇಕಾದ ಕಾರ್ಯಗಳನ್ನು ಶ್ರೀಮಠ ಮಾಡುತ್ತಿರುವುದು ಹೆಮ್ಮೆಯ ವಿಚಾರ: ಶರಣ ಪ್ರಕಾಶ್ ಪಾಟೀಲ್
ನಾಗಮಂಗಲ :ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ೨೦೨೫ನೇ ಸಾಲಿನ ವೈದ್ಯಕೀಯ ಮತ್ತು ಅನ್ವಯಿಕ ಆರೋಗ್ಯ ವಿಜ್ಞಾನಗಳ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಭವ್ಯವಾಗಿ ನೆರವೇರಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಮಾತನಾಡಿ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ ಪರಿಶ್ರಮದ ಫಲವಾಗಿ ಸ್ಥಾಪನೆಯಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಈ ಮಠವನ್ನು ಪೂಜ್ಯ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇಂತಹ ಕ್ಷೇತ್ರದಲ್ಲಿ ಓದುತ್ತಿರುವುದು ನಿಮಗೆ ಶ್ರೇಷ್ಠ ಅವಕಾಶ ಹಾಗೂ ಸರ್ಕಾರ ಮಾಡಬೇಕಾದ ಕಾರ್ಯಗಳನ್ನು ಶ್ರೀಮಠವು ಮಾಡುತ್ತಿರುವುದು ಹೆಮ್ಮೆ ಪಡುವ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು ಇದೇ ಸಂದರ್ಭದಲ್ಲಿ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯವು ಹೊರತಂದಿರುವ ಅಂಕಣ ಬರಹದ ಹೊತ್ತಿಗೆಗಳನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪರಮಪೂಜ್ಯ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ಮಹತ್ತರ ಆಶಯವೆಂದರೆ ಹಳ್ಳಿಗಾಡಿನ ಬಡ ಜನರ ಸೇವೆ ಮಾಡುವುದು ಅದರಂತೆ ನೀವು ಸಹ ಮುಂದೆ ಗ್ರಾಮೀಣ ಭಾಗದ ಬಡಜನರ ಸೇವೆಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಉಪ ಕುಲಪತಿ ಡಾ. ಎಸ್.ಎನ್. ಶ್ರೀಧರ ನೆರೆದಿದ್ದ ನೂತನ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಪ್ರಾಂಶುಪಾಲರಾದ ಡಾ. ಎಂ.ಜಿ. ಶಿವರಾಮು ಎಸಿಯು ಸ್ವಾಗತ ಕಾರ್ಯಕ್ರಮದ ಅಂಗವಾಗಿ ಹೊಸ ವಿದ್ಯಾರ್ಥಿಗಳಿಗೆ ಸಂಸ್ಥೆಯ ಉದ್ದೇಶಗಳು ಶೈಕ್ಷಣಿಕ ಮೌಲ್ಯಗಳು ಮತ್ತು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸೇವಾ ಪರಂಪರೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ
ಡಾ. ಸಿ.ಕೆ. ಸುಬ್ಬರಾಯ ಡಾ. ಕೆ.ಎಂ. ಶಿವಕುಮಾರ್ ಶ್ರೀ ಬಿ.ಕೆ. ಉಮೇಶ್ ಡಾ. ರವಿ ಕೆ.ಎಸ್ ಹಾಗೂ ಡಾ. ರಮೇಶ್ ಡಾ.ಆಲಿಯಾ ನುಸ್ರತ್ ಡಾ.ವಿಜಯ್ ಶಂಕರ್ ಡಾ.ತೇಜಸ್ವಿ ಡಾ.ರಾಘವೇಂದ್ರ ಚಂದನ್ ರಾಜ್ ಸಿ ಎನ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾಗಿದ್ದ ಪ್ರಸ್ತುತ ಸಮಾಜದ ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸಿರುವ ಡಾ.ಅರುಂಧತಿ ಚಂದ್ರಶೇಖರ್, ಐಎಎಸ್,ಪಂಚಾಯತ್ ರಾಜ್, ಕರ್ನಾಟಕ ಸರ್ಕಾರ,
ಡಾ.ನಾಗೇಶ್ ಎನ್ ಎಸ್ ನಿರ್ದೇಶಕರು ಜಠರ ಕರುಳು ಮತ್ತು ಅಂಗಾಂಗ ಕಸಿ ಶಾಸ್ತ್ರ ವಿಭಾಗ ಬೆಂಗಳೂರು ಇವರನ್ನು ಗೌರವಿಸಲಾಯಿತು ಹಾಗೂ ಪಿಜಿ ನೀಟ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದ ಕಾಲೇಜಿನ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಅನ್ವಯಿಕ ಆರೋಗ್ಯ ವಿಜ್ಞಾನಗಳ ವಿದ್ಯಾರ್ಥಿಗಳು ಅವರ ಪೋಷಕರು ಭಾಗವಹಿಸಿದ್ದರು ಹಾಗೂ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರು ಮತ್ತು ಸಿಬ್ಬಂದಿಗಳು ಇದ್ದರು.
(ವರದಿ- ಕೌಶಿಕ್ ತಟ್ಟೇಕೆರೆ)

