ಕೊಪ್ಪಳ: ಸಿನಿಮಾರಂಗದ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ದುರ್ಮರಣ
ಕೊಪ್ಪಳ: ಸಿನಿಮಾರಂಗದ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ದುರ್ಮರಣ
ಕೊಪ್ಪಳ ಜಿಲ್ಲೆಯ ಕನಕಗಿರಿ ಮೂಲದ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ತಮ್ಮ ಹುಟ್ಟುಹಬ್ಬದಂದೇ ಅಕಾಲಿಕವಾಗಿ ಸಾವನ್ನಪ್ಪಿರುವ ದುಃಖದ ಘಟನೆ ನಡೆದಿದೆ.
ಬೆಂಗಳೂರು ನಗರದಲ್ಲಿ ವಾಸವಾಗಿದ್ದ ಆರ್ಯನ್, ಸುಮಾರು 15 ದಿನಗಳ ಹಿಂದೆ ಹಾಸನಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತಕ್ಕೊಳಗಾಗಿ ತೀವ್ರ ಗಾಯಗೊಂಡಿದ್ದರು. ಚಿಕಿತ್ಸೆ ಪಡೆಯುತ್ತಿದ್ದರೂ ಜೀವ ಉಳಿಸಲಾರದೆ, ಹುಟ್ಟುಹಬ್ಬದಂದೇ ವಿಧಿವಶರಾದರು.
ಆರ್ಯನ್ ಅವರ ನಿಧನದ ನಂತರ ಕುಟುಂಬದವರು ಮತ್ತು ಸ್ನೇಹಿತರು ಭಾವುಕ ಕ್ಷಣದಲ್ಲಿ ಶವದ ಕೈ ಹಿಡಿದು ಕೇಕ್ ಕತ್ತರಿಸಿ ಅವರ ಹುಟ್ಟುಹಬ್ಬವನ್ನು ಆಚರಿಸಿ, ಹೃದಯಮಿಡಿದ ನಮನ ಸಲ್ಲಿಸಿದರು.
ಮೃತ ಆರ್ಯನ್ ಅವರ ಕುಟುಂಬಸ್ಥರು ಅವರ ಅಂಗಾಂಗ ದಾನ ಮಾಡಿ, ಮಾನವೀಯತೆ ಮತ್ತು ಸಾರ್ಥಕತೆಯ ಮಾದರಿಯನ್ನು ನಿರ್ಮಿಸಿದ್ದಾರೆ.
ಆರ್ಯನ್ ಗವಿಸ್ವಾಮಿ ಅವರ ಅಂತ್ಯಕ್ರಿಯೆ ಇಂದು ಕನಕಗಿರಿಯಲ್ಲಿರುವ ಅವರ ಹುಟ್ಟೂರಿನಲ್ಲಿ ನೆರವೇರಲಿದೆ.

